ಪ್ರಗತಿವಾಹಿನಿ ಸುದ್ದಿ, ಧಾರವಾಡ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡದಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆದಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಅವಶೇಷಗಳಡಿ ಇನ್ನೂ 25-30 ಜನರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ಈಗಾಗಲೆ 30ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಈ ಮಧ್ಯೆ ಕಟ್ಟಡಕ್ಕೆ ನೀಡಲಾಗಿರುವ ಪರವಾನಿಗೆ, ನಿಯಮ ಉಲ್ಲಂಘನೆ ಮತ್ತಿತರ ಅಂಶಗಳನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕಟ್ಟಡದ ಪಾಲುದಾರರು ಹಾಗೂ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಧಾರವಾಡ: ಕುಸಿದ ಕಟ್ಟಡ ಕಳಪೆಯಷ್ಟೆ ಅಲ್ಲ, ಎಲ್ಲ ನಿಯಮ ಉಲ್ಲಂಘಿಸಲಾಗಿದೆ
ಧಾರವಾಡ ಕಟ್ಟಡ ಕುಸಿತದ ವೀಡಿಯೋ ದೃಷ್ಯಗಳು
ಧಾರವಾಡ: ಲೆಕ್ಕಕ್ಕೆ ಸಿಗದ ಕಟ್ಟಡದ ಅಡಿ ಸಿಲುಕಿದವರ ಸಂಖ್ಯೆ
ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತ