Latest

*ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಮತ್ತೊಂದು ಆಡಿಯೋ ಬಾಂಬ್*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲೇ ಬಿಜೆಪಿ ಶಾಸಕರೊಬ್ಬರ ಆಡಿಯೋ ವೈರಲ್ ಆಗಿದ್ದು, ಕೇಸರಿ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ತಮ್ಮ ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ವಿರುದ್ಧವೇ ಮಾತನಾಡಿದ್ದಾರೆ. ಅಲ್ಲದೇ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆಯೂ ಉಡಾಫೆ ಮಾತನಾಡಿದ್ದಾರೆ ಎನ್ನಲಾಗಿದೆ.

Related Articles

ಆಡಿಯೋದಲ್ಲಿ ಯಾವ ಮೋದಿನೂಇಲ್ಲ ಪಾದಿನೂ ಇಲ್ಲ, ಮೋದಿ ರೈಟ್ ಹ್ಯಾಂಡ್ ಗೂ ನಾನು ಕೆಳಲ್ಲ, ನಾನೇ ಸಿಂಗಲ್ ಆರ್ಮಿ. ನನಗೆ ರೈಟ್, ಲೆಫ್ಟ್ ಇಲ್ಲ. ನಾನೇ ಮೋದಿ, ನಾನೇ ಟ್ರಂಪ್. ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ, ಗೆದ್ರೂ ಚಿಂತೆಯಿಲ್ಲ, ಮಲಗಿದ್ರೂ ಚಿಂತೆಯಿಲ್ಲ. ಚಿಂತೆ ಇಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್ ಮಾತ್ರ ಎಂದಿದ್ದಾರೆ.

ಅಷ್ಟೇ ಅಲ್ಲ ನಾನು ದೇವರು ಇದ್ದಂಗೆ. ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡಿ ಅಂತ ಹೇಳ್ತೀನಿ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ. ನಾನೇ ದೈವ ಬರೆತೀನಿ ಎಂದು ಹೇಳಿದ್ದಾರೆ.

Home add -Advt

ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿರುವ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಈ ಆಡಿಯೋ ಸಂಭಾಷಣೆ ಬಿಜೆಪಿ ನಾಯಕರಿಗೆ ಮುಜುಗರವನ್ನುಂಟುಮಾಡಿದೆ.

https://pragati.taskdun.com/4-members-suicidelodgemangalore/


Related Articles

Back to top button