Latest

ನವೋದ್ಯಮಿಗಳಿಗೆ ಮಾರ್ಗದರ್ಶನ

ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ:  
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ನ ಸ್ಯಾಂಡ್‌ಬಾಕ್ಸ್ ಸ್ಟಾರ್ಟ್‌ಪ್ ಬೆಳಗಾವಿಯ ಕೆಎಲ್‌ಎಸ್ ಐಎಂಇಆರ್ ಸಹಯೋಗದಲ್ಲಿ  ಎ ಶಾಟ್ ಆಟ್ ಎಂಟ್ರಪ್ರಿನ್ಯೂರ್‌ಶಿಪ್ ಎಂಬ ಉದ್ಯಮಶೀಲತೆ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

ನಗರದಲ್ಲಿ ಉದ್ಯಮಪೂರಕ ವಾತಾವರಣ ನಿರ್ಮಿಸಲು ವೇದಿಕೆ ಸಿದ್ಧಪಡಿಸುವುದು ಹಾಗೂ ಯುವೋದ್ಯಮಿಗಳಿಗೆ ಹೊಸ ಉದ್ಯಮಗಳ ಆರಂಭಕ್ಕೆ ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಸಂಪನ್ಮೂಲ ವ್ಯಕ್ತಿಗಳು ಹಾಗೂ ಉದ್ಯಮಿಗಳು ವ್ಯಾಪಾರೋದ್ಯಮಗಳ ಆರಂಭ ಹಾಗೂ ಇತರ ವಿಷಯಗಳ ಕುರಿತು ಮಾತನಾಡಿ ಮಾರ್ಗದರ್ಶನ ಮಾಡಿದರು. ೯೦ಕ್ಕೂ ಹೆಚ್ಚು ಯುವ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಚೀನ್ ಸಬ್ನಿಸ್ (ವ್ಯವಸ್ಥಾಪಕ ನಿರ್ದೇಶಕರು, ಫೆರ್ರೋಕಾಸ್ಟ್),  ವಿವೇಕ ಪುಣೇಕರ (ನೂತನ ಉದ್ಯಮಗಳ ಮಾರ್ಗದರ್ಶಕ, ಐಎಎನ್ ಸದಸ್ಯರು),  ವೆಂಕಟೇಶ ಪಾಟೀಲ (ನೂತನ ಉದ್ಯಮಗಳ ಮಾರ್ಗದರ್ಶಕ, ಬಂಡವಾಳಗಾರರು),  ಅಭಿಷೇಕ ಲಠ್ಠೆ ( ಸಂಸ್ಥಾಪಕರು ಹಾಗೂ ಮುಖ್ಯ ಕಾರ‍್ಯನಿರ್ವಹಣಾಽಕಾರಿ ಸೆನ್ಸ್‌ಗಿಜ್ ಇನ್‌ಕಾ),  ರಾಜೇಂದ್ರ ಬೆಳಗಾವಕರ (ಕೆಎಲ್‌ಎಸ್ ಐಎಂಇಆರ್ ಜಿಸಿ ಚೇರಮನ್) ಹಾಗೂ  ಸಿ.ಎಂ ಪಾಟೀಲ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ಯಾಂಡ್‌ಬಾಕ್ಸ್ ಸ್ಟಾರ್ಟ್‌ಪ್ಸ್) ಆಗಮಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button