ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ ಹುಕ್ಕೇರಿ ನವದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೀವ ಪ್ರತಾಪ ರೂಢಿ ಅವರನ್ನು ಭೇಟಿಯಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ರೂಢಿಯವರ ಮನೆಗೆ ತೆರಳಿ ಈ ಸಂಬಂಧ ಹುಕ್ಕೇರಿ ಮನವಿ ಸಲ್ಲಿಸಿದ್ದಾರೆ. ಹಿರಣ್ಯಕೇಶಿ ನದಿಯಲ್ಲಿಯ ಹೆಚ್ಚುವರಿ ನೀರನ್ನು ಹುಕ್ಕೇರಿ ತಾಲೂಕು ಇಂಗಳಿ ಸಮೀಪ ಚಿಕ್ಕೋಡಿ ಕಾಲುವೆಗೆ ಹರಿಸಬೇಕು. ವೇದಗಂಗಾ ನದಿಯಿಂದ ಪಟ್ಟಣಕುಡಿ ಮತ್ತು ವಾಲ್ಕಿ ಕೆರೆಗಳನ್ನು ತುಂಬಿಸಬೇಕು. ದೂಪದಾಳ ಬ್ಯಾರೇಜ್ ಸಮೀಪ ಹಿರಣ್ಯಕೇಶಿ ನದಿಯಿಂದ ನೀರನ್ನೆತ್ತಿ ನಾಗರಮುನ್ನೋಳಿ ಮತ್ತು ಬೆಳಕೂಡ ಸಮೀಪ ಬ್ಯಾರೇಜ್ ಗಳಿಗೆ ತುಂಬಿಸಬೇಕು. ಚಿಕ್ಕೋಡಿ ತಾಲೂಕಿನ ಕರಗಾಂವ್ ಏತನೀರಾವರಿ ಯೋಜನೆ ಜಾರಿಗೊಳಿಸಬೇಕು. ಚಿಕ್ಕೋಡಿ ತಾಲೂಕಿನ ಕಲ್ಲೋಳದಲ್ಲಿ ಕೃಷ್ಣಾ ನದಿಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಬೇಕು ಎನ್ನುವ ಕೋರಿಕೆಯನ್ನು ಅವರು ಮುಂದಿಟ್ಟಿದ್ದಾರೆ.