Latest

ನ್ಯಾಯವಾದಿಗಳ ಕೆಲಸ ವ್ಯಾಜ್ಯ ಹೆಚ್ಚಿಸುವುದಲ್ಲ -ಅನುರಾಧಾ ಸಿ೦ಹ

ಅ೦ತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕರ್ನಾಟಕ ಕಾನೂನು ಸ೦ಸ್ಥೆಯ ರಾಜಾ ಲಖಮಗೌಡಾ ಕಾನೂನು ಮಹಾವಿದ್ಯಾಲಯದಲ್ಲಿ ಅ೦ತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಮಂಗಳವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ನ್ಯಾಯವಾದಿ  ಅನುರಾಧಾ ಸಿ೦ಹ  ಮುಖ್ಯ ಅತಿಥಿಗಳಾಗಿ ಮಾತನಾಡಿ, ನಮ್ಮಲ್ಲಿ ಪ್ರತಿಯೊಬ್ಬರೂ ಸಾಧನೆ  ಮಾಡಬಹುದು ಆದರೆ ಅದಕ್ಕಿರುವ ಅವಶ್ಯಕ ಅ೦ಶವೆ೦ದರೆ ನಾವು ನಮ್ಮ ಜಾಣ್ಮೆಯನ್ನು ಹರಿತವಾಗಿ  ಉಪಯೋಗಿಸಬೇಕು ಎ೦ದು ಹೇಳಿದರು.

Home add -Advt

ಜನರಲ್ಲಿ ನ್ಯಾಯಾಲಯಗಳ ಬಗೆಗೆ ಇರುವ ತಪ್ಪು ಕಲ್ಪನೆಯನ್ನು ವಿದ್ಯಾರ್ಥಿಗಳು ಹೋಗಲಾಡಿಸಬೇಕು.  ವಿದ್ಯಾರ್ಥಿಗಳು ತಮ್ಮ ಮೂಲವನ್ನು ಮರೆಯಬಾರದು.  ನ್ಯಾಯಾವಾದಿಗಳ ಕೆಲಸವು  ಸಮಾಜದಲ್ಲಿ ವ್ಯಾಜ್ಯಗಳನ್ನು ಹೆಚ್ಚಿಸುವುದಾಗಿರದೇ ಅವುಗಳನ್ನು ಶಾ೦ತಿಯುತವಾಗಿ ಬಗೆಹರಿಸುವುದಾಬೇಕು ಎ೦ದು ಅವರು ಹೇಳಿದರು.

ಪ್ರಾ೦ಶುಪಾಲರಾದ ಡಾ. ಸ೦ಧ್ಯಾ ಎಚ್. ವಿ. ಮುಖ್ಯ ಅತಿಥಿಗಳನ್ನು ಗೌರವಿಸಿದರು. ಇದೇ ಸ೦ದರ್ಭದಲ್ಲಿ  ಇಬ್ಬರು ಮಹಿಳಾ ಸಾಧಕಿಯರಾದ ಎಚ್. ಐ. ವಿ. ಪೀಡಿತ ಮಕ್ಕಳ ಸಲುವಾಗಿ ಕೆಲಸಮಾಡುತ್ತಿರುವ ಸಮಾಜ ಸೇವಕಿ ಮರಿಯಮ್ಮ ಎನ್.,  ಮತ್ತು  ಸ್ವಯ೦ ಉದ್ಯೋಗಿ ಮಹಿಳೆ ಸುಚಿತಾ ಪಾಟೀಲರನ್ನು   ಮುಖ್ಯ ಅತಿಥಿಗಳು ಮತ್ತು ಪ್ರಾ೦ಶುಪಾಲರು ಸನ್ಮಾನಿಸಿದರು.

ಮಹಿಳಾ ಸಾಧಕಿಯರು ತಮ್ಮ ಅನುಭವವನ್ನು ಮತ್ತು ಸಾಧನೆಯ ಹಾದಿಯಲ್ಲಿ ಎದುರಿಸಿದ ಅಡೆತಡೆಗಳನ್ನು  ವಿವರಿಸಿದರು. ಈ ಸ೦ದರ್ಭದಲ್ಲಿ ರಾಜಾ ಲಖಮಗೌಡಾ ಕಾನೂನು ಮಹಾವಿದ್ಯಾಲಯದ ಸಿಬ್ಬ೦ದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಸೌ೦ದರ್ಯ ಪಿ. ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು, ಶುಭಾ೦ಗಿ  ಬಿ. ಸ್ವಾಗತಿಸಿದರು,  ಮೇಘಾ ಎಸ್. ವ೦ದಿಸಿದರು ಮತ್ತು ಅ೦ತಿಮಾ ಎಮ್. ಕಾರ್ಯಕ್ರಮವನ್ನು ನಿರ್ವಹಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಂಚಿರಿ)

 

Related Articles

Back to top button