ಪ್ರಗತಿವಾಹಿನಿ ಸುದ್ದಿ, ಕೂಚ್ ಬೆಹಾರ್:
ಇಲ್ಲೊಬ್ಬ ಸಣ್ಣ ಮೆಡಿಕಲ್ ಅಂಗಡಿ ನಡೆಸುತ್ತಾನೆ. ಆದರೆ ಅಷ್ಟೇ ಆತನ ಕೆಲಸವಲ್ಲ. ಆತ 1,114 ಗ್ರುಪ್ ಗಳಿಗೆ ಮಾಲಿಕನಾಗಿದ್ದಾನೆ.
ಆಶ್ಚರ್ಯವಾಯಿತೇ?
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಗೋಪಾಲಪುರ ಗ್ರಾಮದ ದೀಪಕ್ ದಾಸ್ ಎನ್ನುವ ವ್ಯಕ್ತಿ 1114 ವಾಟ್ಸಪ್ ಗ್ರುಪ್ ಗಳ ಅಡ್ಮಿನ್! ಜೊತೆಗೆ ಫೇಸ್ ಬುಕ್, ಟ್ವೀಟರ್ ಖಾತೆಗಳನ್ನೂ ಹೊಂದಿದ್ದಾನೆ. ಇದರ ಮೂಲಕ ದಿನವೂ ಲಕ್ಷಾಂತರ ಜನರನ್ನು ತಲುಪುತ್ತಾನೆ.
ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿರುವ ಈತ ಸಧ್ಯ ನಡೆಯುತ್ತಿರುವ ಚುನಾವಣೆಗಾಗಿ ಬಿಜೆಪಿಯ ವಿಚಾರಗಳನ್ನು ಪ್ರತಿಯೊಬ್ಬ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾನೆ. ದಿನವೂ ನೂರಾರು ಜನರು ಗ್ರುಪ್ ನಿಂದ ಹೊರಹೋಗುತ್ತಾರೆ. ಮತ್ತೆ ಹೊಸ ಸದಸ್ಯರನ್ನು ಸೇರಿಸುತ್ತಾನೆ. ನಸುಕಿನಲ್ಲೇ ಕೆಲಸ ಶುರು ಮಾಡುವ ಈತ ರಾತ್ರಿಯವರೆಗೂ ಬಂದ ಮೆಸೇಜ್ ಗಳನ್ನು ಎಲ್ಲ ಗ್ರುಪ್ ಗಳಿಗೆ ಫಾರವರ್ಡ ಮಾಡುವುದರಲ್ಲಿ ನಿರತನಾಗಿರುತ್ತಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ