ಪ್ರಗತಿವಾಹಿನಿ ಸುದ್ದಿ, ಕೋವಾಡ (ಮಹಾರಾಷ್ಟ್ರ)
ಮಹಾರಾಷ್ಟ್ರದ ಕೋವಾಡ ಗ್ರಾಮದಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪಾರ್ಥನಾ ಮಂದಿರಕ್ಕೆ ನುಗ್ಗಿ ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಕೋವಾಡ ಮತ್ತು ದಡ್ಡಿ ಮುಖ್ಯ ರಸ್ತೆ ನಡುವೆ ದುಂಡಿಗೆ ಗ್ರಾಮದ ರಸ್ತೆಯ ಹತ್ತಿರವಿರುವ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ರೈಸ್ತ ಧರ್ಮದ ಪ್ರಚಾರ ಮತ್ತು ಪ್ರಾರ್ಥನೆ ಮಾಡುತ್ತಿದ್ದರು. ಇದನ್ನು ತಿಳಿದ ಬೆಳಗಾವಿ ಕಡೆಯಿಂದ ಬಂದ 20 ಕ್ಕೂ ಹೆಚ್ಚು ಜನರ ಗುಂಪೊಂದು ಬೆಳಗ್ಗೆ ಸುಮಾರು 12 ಗಂಟೆ ವೇಳೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಪರಿಣಾಮ ಹಲವರು ಗಾಯಗೊಂಡಿದ್ದಾರೆ. ತಡೆಯಲು ಮುಂದಾದವರ ಮೇಲೂ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಳಗಾವಿ ಕಡೆಯಿಂದ ದ್ವಿಚಕ್ರ ವಾಹನದ ಮೇಲೆ ಮುಸುಕುದಾರಿಯಾಗಿ ಬಂದ ಗುಂಪು ಹಲ್ಲೆ ನಡೆಸಿದೆ. ವಾಪಸ್ ತೆರಳುವಾಗ ದಾರಿ ಮಧ್ಯೆ ಕೋವಾಡ , ಕುದನೂರ, ತಿಳಗೋಳಿ, ರಾಜಗೋಳಿ ಮತ್ತು ಕುರಿಹಾಳ ಗ್ರಾಮದವರು ತಡೆಯಲು ಪ್ರಯತ್ನಸಿದಾಗ ಮಚ್ಚುಗಳಿಂದ ಇರಿದಿದ್ದಾರೆ. ಹಲವು ವಾಹನಗಳ ಮೇಲೂ ಮನಸೋ ಇಚ್ಚೆ ದಾಳಿ ಮಾಡಿ ಜಖಂಗೊಳಿಸಿದ್ದಾರೆ.
ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಸೆರೆ ಹಿಡಿಯಲು ಗಡಿ ಗ್ರಾಮಗಳಲ್ಲಿ ಪೊಲೀಸರು ಪಹರೆ ಕಾಯುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ