ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರತಿ ವರ್ಷ ಶ್ರದ್ಧೆ ಭಕ್ತಿಯಿಂದ ಆಚರಿಸುವ ಚಾಂಗದೇವ ಜಾತ್ರೆಯನ್ನು ಸರ್ವರೂ ಶಾಂತಿಯುತವಾಗಿ ಆಚರಿಸಬೇಕೆಂದು ಘಟಪ್ರಭಾ ಪಿ.ಎಸ್.ಐ. ಆರ್.ವಾಯ್.ಬೀಳಗಿ ಹೇಳಿದರು.
ಮಾರ್ಚ್ ೨೪, ೨೫ ರಂದು ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಚಾಂಗದೇವ ಜಾತ್ರೆ ಹಾಗೂ ಹೋಳಿ ಹಬ್ಬದ ನಿಮಿತ್ತ ಗ್ರಾಮದ ಚಾಂಗದೇವ ದೇವಸ್ಥಾನದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಎರಡು ದಿನಗಳ ಜಾತ್ರೆಯ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸೌಹಾರ್ದತೆಯಿಂದ ಶಾಂತಿಯುತವಾಗಿ ಜಾತ್ರೆಯನ್ನು ಆಚರಿಸಬೇಕೆಂದು ಹೇಳಿದರು.
ಹೋಳಿ ಹಬ್ಬ ರಾಷ್ರ್ಟೀಯ ಹಬ್ಬವಾಗಿದೆ. ಬಣ್ಣದಾಟ ಆಡುವಲ್ಲಿ ಯಾರಿಗೂ ಬಲವಂತ ಮಾಡಬಾರದು, ರಾಸಾಯನಿಕ ಮಿಶ್ರಣ ಬಣ್ಣ ಉಪಯೋಗಿಸಿ ಇತರರಿಗೆ ತೊಂದರೆ ನೀಡುವಂತಿರಬಾರದು ಎಂದು ಅವರು ವಿವರಿಸಿದರು.
ಕಾಡೇಶ ತಳಗೇರಿ ಮಾತನಾಡಿ ಶಾಂತಿಯುತ ಜಾತ್ರೆ ಆಚರಿಸಲು ಕೋರಿದರು.
ಅರ್ಚಕ ಗೋಪಾಲ ಖಟಾವಕರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆ ಮೇಲೆ ದೇವಋಷಿ ಪರಶುರಾಮ ಪೂಜೇರಿ, ಬಸವರಾಜ ಗೋಕಾಕ, ಮುಸಾ ಸರಕಾವಸ, ಜೈಬುನ್ನಿಸಾ ಬಡೇಖಾನ, ಚಾಂದ ಪನಿಬಂಧ, ಮಲ್ಲಪ್ಪ ಭೋಜಿ ಇವರು ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಶಂಕರ ಹುಣಶ್ಯಾಳಿ, ರಾಘವೇಂದ್ರ ರಾಯಚೂರ, ಶಿವಾಜಿ ಕೋಣಿ, ಭಾರತಿ ಗುಮತಿ, ಸುನಂದಾ ಹುಣಶ್ಯಾಳಿ, ಶಂಕ್ರೆವ್ವ ಭೋಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.