ಸಿಸಿಐಬಿ ಮತ್ತು ಟಿಳಕವಾಡಿ ಪೊಲೀಸರ ಕಾರ್ಯಾಚರಣೆ ; ೧೦ ಮನೆ ಕಳುವು ಪ್ರಕರಣ ಬೆಳಕಿಗೆ; ಒಟ್ಟು ರೂ.೮,೭೭,೪೬೩ ಮೊತ್ತದ ಬಂಗಾರ ಮತ್ತು ಬೆಳ್ಳಿಯ ಆಭರಣ ವಶಕ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರದಲ್ಲಿ ಕೆಲವು ದಿನಗಳ ಹಿಂದೆ ಘಟಿಸಿದ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಇಂಹತ ಮನೆಗಳ್ಳರನ್ನು ಪತ್ತೆ ಮಾಡಲು ಲೋಕೇಶಕುಮಾರ ಬಿ ಎಸ್. ಪೊಲೀಸ್ ಆಯುಕ್ತರು, ಹಾಗೂ ಸೀಮಾ ಲಾಟ್ಕರ್, ಡಿಸಿಪಿ (ಕಾ&ಸು), ಮತ್ತು ಯಶೋಧಾ ವಂಟಗೋಡಿ ಡಿಸಿಪಿ(ಅ&ಸಂ) ಸಿಸಿಐಬಿ ಘಟಕ ಹಾಗೂ ನಗರದ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯ ಒಂದು ವಿಶೇಷ ತಂಡವನ್ನು ರಚಿಸಿದ್ದರು.
ಭಾಗ್ಯನಗರ, ಅನಗೋಳ ರೋಡ್ ನಲ್ಲಿ ಸಂಶಯುಕ್ತ ಆರೋಪಿತರ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡ ೧) ಸಾಯೀದ್ ಇಬ್ರಾಯಿಂ ಲಸ್ಕರವಾಲೆ ವಯಾ ೨೧ ವರ್ಷ ಜಾತಿ: ಮುಸ್ಲಿಂ ಸಾ ಅನಗೋಳ ಬೆಳಗಾವಿ ೨) ಅಬ್ದುಲ್‌ಘನಿ ಶಬ್ಬೀರ ಶೇಖ ವಯಾ ೨೨ ವರ್ಷ ಜಾತಿ: ಮುಸ್ಲಿಂ ಸಾ: ಅಂಬೇಡ್ಕರ ನಗರ ಅನಗೋಳ ಬೆಳಗಾವಿ ೩) ಮಹಮ್ಮದಸಿದ್ದಿಕ್ ರಿಯಾಜಅಹಮ್ಮದ ವಯಾ ೨೨ ವರ್ಷ ಜಾತಿ: ಮುಸ್ಲಿಂ ಸಾ: ಅನಗೋಳ ಬೆಳಗಾವಿ ಎಂಬುವವರನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರೋಪಿತರು ಬೆಳಗಾವಿ ನಗರದ ಟಿಳಕವಾಡಿ ಠಾಣೆ-೦೬, ಉದ್ಯಮಭಾಗ ಠಾಣೆ -೦೧, ಮಾರಿಹಾಳ ಠಾಣೆ -೦೧, ಕಾಕತಿ ಠಾಣೆ -೦೧ ಮತ್ತು ಹುಕ್ಕೇರಿ ಠಾಣೆ ಹದ್ದಿಯಲ್ಲಿ -೦೧ ಹೀಗೆ ಒಟ್ಟು ೧೦ ಭಾಗಗಳಲ್ಲಿ ಮನೆಗಳಿಗೆ ಕನ್ನಾ ಹಾಕಿ ರೂ.೪,೮೫,೭೪೦ ಮೌಲ್ಯದ ೧೪೯ ಗ್ರಾಂ ಬಂಗಾರದ ಆಭರಣಗಳು, ರೂ.೩,೯೧,೭೨೩ ಮೌಲ್ಯದ ೧೦ ಕೆ.ಜಿ ೭೦ ಗ್ರಾಂ ತೂಕದ ಬೆಳ್ಳಿ ಆಭರಣಗಳು ಹೀಗೆ ಒಟ್ಟು ರೂ.೮,೭೭,೪೬೩ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮೂರು ಜನ ಆರೋಪಿತರಿಂದ ಒಟ್ಟು ರೂ.೮,೭೭,೪೬೩ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಒಂದು ಬಜಾಜ ಪಲ್ಸರ ಮೋಟಾರ ಸೈಕಲ್ ನಂ. ಕೆಎ-೨೪/ಕ್ಯೂ-೬೮೯೪ ವಶಪಡಿಸಿಕೊಳ್ಳಲಾಗಿದೆ.
೧೦ ಮನೆಗಳವು ಪ್ರಕರಣಗಳನ್ನು ಭೇಧಿಸುವಲ್ಲಿ ಯಶಸ್ವಿಯಾದ ಜಯವಂತ ಅ ದುಲಾರಿ ಪಿಐ ಸಿಸಿಐಬಿ, ಎಸ್. ಆರ್. ನಾಯ್ಕ ಪಿಐ ಟಿಳಕವಾಡಿ ಠಾಣೆ, ಎಎಸ್‌ಐ ಎಮ್. ವೈ. ಕಾರೀಮನಿ, ಹಾಗೂ ಸಿಬ್ಬಂದಿಯಾದ ವಿ.ಡಿ. ಸರನಾಯಕ, ಆರ್. ಎಮ್. ಪರಮಾಜ, ಎಸ್. ಎ. ರಾವುತ, ಆರ್ ಎಸ್ ನಾಯಿಕವಾಡಿ, ಎಸ್. ಎಸ್. ಪಾಟೀ, ಎಸ್ ಆರ್ ಮೇತ್ರಿ, ಎಸ್.ಸಿ. ಕೋರೆ, ಬಿ. ಎನ್. ಬಳಗನ್ನವರ, ಎಮ್. ಎಮ್. ವಡೇಯರ, ಸಿ.ಜೆ.ಚಿನ್ನಪ್ಪಗೋಳ, ಎ ಕೆ ಕಾಂಬಳೆ, ಲಕ್ಷ್ಮಣ ಗೂಗಾಡೆ, ಪಿ. ಎಸ್. ಭೂಷಿ, ಆರ್. ಜೆ. ಕೋಳಿ, ಎಮ್. ಜಿ. ಮರನಿಂಗಗೋಳ, ಟಿ.ಜಿ.ಸುಳಕೋಡ ಮಹಾದೇವ ಮಾಂಗ ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ