Latest

ಪ್ರಗತಿವಾಹಿನಿ ಮಹಿಳಾ ದಿನಾಚರಣೆಗೆ ಅಪೂರ್ವ ಸ್ಪಂದನೆ: ಎಲ್ಲರಿಗೂ ಅಭಿವಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೇವಲ 3 ತಿಂಗಳ ನಿಮ್ಮ ಮಗು ಪ್ರಗತಿವಾಹಿನಿ ಮಹಿಳಾ ದಿನಾಚರಣೆ ಸಂಭ್ರಮದ ಫೋಟೋಗಳನ್ನು ಪ್ರಕಟಿಸುವ ಮೂಲಕ ಮೊದಲ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು. ತನ್ಮೂಲಕ ಮಹಿಳೆಯರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.

 ಮಹಿಳಾ ದಿನಾಚರಣೆಯಂದು ಸಂಭ್ರಮಿಸಿದ ಮಹಿಳೆಯರು

ಮಹಿಳಾ ದಿನಾಚರಣೆಯ ಸಂಭ್ರಮದ ಫೋಟೋಗಳನ್ನು ಕಳುಹಿಸುವಂತೆ ಪ್ರಗತಿವಾಹಿನಿ ನೀಡಿದ ಕರೆಗೆ ಬಂದ ಪ್ರತಿಕ್ರಿಯೆ ಅದ್ಭುತ. ಬೆಳಗಾವಿ ಜಿಲ್ಲೆಯ ಮೂಲೆಮೂಲೆಗಳಿಂದಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪೋಟೋಗಳು ಬಂದವು. ಹಲವರು ಲೇಖನಗಳನ್ನು ಕಳುಹಿಸಿದರು, ಕವನಗಳನ್ನು ಕಳುಹಿಸಿದರು.

Home add -Advt

ಅನೇಕರು ಫೋನ್ ಮಾಡಿ ತಮ್ಮ ಫೋಟೋಗಳನ್ನು ಪ್ರಕಟಿಸುವಂತೆ ಆಗ್ರಹಪೂರ್ವಕವಾಗಿ ವಿನಂತಿಸಿದರು. ಕೆಲವು ಫೋಟೋಗಳನ್ನು ಗುಣಮಟ್ಟದ ಕಾರಣದಿಂದಾಗಿ, ಇನ್ನು ಕೆಲವನ್ನು ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಆದರೂ ಸಂಜೆಯವರೆಗೂ ಫೋಟೋಗಳನ್ನು ಪ್ರಗತಿವಾಹಿನಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಯಿತು. ಶುಕ್ರವಾರವಷ್ಟೆ ಅಲ್ಲದೆ ಶನಿವಾರ ಬೆಳಗ್ಗೆಯೂ ಕೆಲವರು ಫೋಟೋಗಳನ್ನು ಕಳುಹಿಸುತ್ತಿದ್ದಾರೆ.

ಪ್ರಗತಿವಾಹಿನಿ ಮೇಲಿನ ತಮ್ಮೆಲ್ಲರ ಪ್ರೀತಿಗೆ ಕೋಟಿ ಕೋಟಿ ವಂದನೆಗಳು. ತಮ್ಮ ಸಹಕಾರದಿಂದಾಗಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ವಿಟಿಯು ಉಳಿಸಿ ಅಭಿಯಾನದಲ್ಲೂ ಎಲ್ಲರ ಸಹಕಾರ ಸ್ಮರಣೀಯವಾಗಿತ್ತು. ತಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ.

ನೀವು ಕಳುಹಿಸಿದ ಫೋಟೋಗಳನ್ನು ಇಲ್ಲಿ ನೋಡಿ – ಮಹಿಳಾ ದಿನಾಚರಣೆಯಂದು ಸಂಭ್ರಮಿಸಿದ ಮಹಿಳೆಯರು

Related Articles

Back to top button