Latest

ಪ್ರಜ್ವಲ ರಾಜಿನಾಮೆ ಇಂಗಿತಕ್ಕೆ ಅನರ್ಹತೆಯ ಭೀತಿ ಕಾರಣವೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಗೆದ್ದ ಮರುದಿನವೇ ರಾಜಿನಾಮೆ ನೀಡುವ ಮಾತನ್ನಾಡುತ್ತಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ನಿರ್ಧಾರಕ್ಕೆ ಅನರ್ಹತೆಯ ಭೀತಿ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ.

ತಪ್ಪು ಅಫಿಡವಿಟ್ ನಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್ ಅಲ್ಲಿ ಸೋಲುವ ಭೀತಿಯಲ್ಲಿದ್ದಾರೆ. ಹಾಗಾದಲ್ಲಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಳ್ಳುವ ಜೊತೆಗೆ ಮುಂದಿನ 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹಾಗಾಗಿ ರಾಜಿನಾಮೆ ನೀಡಿ ಈ ಸಂಕಷ್ಟದಿಂದ ಪಾರಾಗಲು ಅವರು ಬಯಸಿದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಕೆಲವರು, ಇದೇನು ಬಿಎಂಟಿಸಿ ಬಸ್ ಸೀಟ್ ಅಲ್ಲ ತಾತನಿಗೆ ಬಿಟ್ಟುಕೊಡಲು ಎಂದೂ ಉಗಿಯುತ್ತಿದ್ದಾರೆ. ಚುನಾವಣೆಗೆ ಖರ್ಚು ಮಾಡುವುದು ನಿಮ್ಮಪ್ಪನ ದುಡ್ಡಲ್ಲ ಇದು ಜನರ ದುಡ್ಡು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ಪ್ರಜ್ವಲ್ ರೇವಣ್ಣ ನಿರ್ಧಾರದ ಹಿಂದೆ ದೊಡ್ಡ ನಾಯಕವೇ ಇದೆ ಎಂದು ಜನರು ಆಡಿಕೊಳ್ಳುವಂತಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button