ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪ್ರಥಮ ಸಮ್ಮೇಳನಕ್ಕೆ ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸೋಮವಾರ ಜಿಲ್ಲಾಧ್ಯಕ್ಷೆ ಮಂಗಳಾ ಮೆಡಗುಡ್ಡ ಚಾಲನೆ ನೀಡಿದರು.
ಅಂಬಡಗಟ್ಟಿಯ ಡಾ.ಜಚನಿ ಅವರು ಜನಿಸಿದ ಮನೆ ಮುಂಭಾಗದಿಂದ ಭುವನೇಶ್ವರಿದೇವಿಗೆ ಪೂಜೆ ಸಲಿಸಿದರು.
ನಂತರ ಅಲಂಕೃತ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷೆ ಸುನಂದಾ ಎಮ್ಮಿ, ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಹಾಗೂ ತಾಲೂಕಾಧ್ಯಕ್ಷ ಚಂದ್ರಶೇಖರ ಹಲಸಗಿ ಅವರನ್ನು ಮೆರವಣಿಗೆ ಮುಖಾಂತರ ಗ್ರಾಮದ ಪ್ರಮುಖ ಓಣಿಯಲ್ಲಿ ಘೋಷಣೆ ಕೂಗುತ್ತಾ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ