Latest

ಪ್ರಧಾನಿಯವರಿಂದ ಸಾಕಷ್ಟು ಜನಪರ ಯೋಜನೆ ಜಾರಿ :ಐಹೊಳೆ

 

ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ 

ಬಡವರಿಗಾಗಿ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಸಮೀಪದ ಜಾಗನೂರ, ವಿಜಯನಗರ, ಡೊಣವಾಡ, ಬೆನ್ನಳ್ಳಿ, ಕುಮಟೊಳ್ಳಿ ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಉಜ್ವಲಾ ಪ್ಲಸ್ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿ ಅವರು ಮಾತನಾಡಿದರು.
ಕಳೆದ ೬೦ ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಬಡವರಿಗೆ ಯಾವುದೇ ಯೋಜನೆ ಜಾರಿಗೆ ತರದೆ ಭ್ರಷ್ಟಾಚಾರ ನಡೆಸಿತ್ತು. ಕಳೆದ ಐದು ವರ್ಷಗಳಲ್ಲಿ ಫ್ರಧಾನಿ ಮೋದಿಜಿ ಸಾಕಷ್ಟು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ನಿನ್ನೆ ನಡೆದ ಇತಿಹಾಸಿಕ ಬಜೆಟನಲ್ಲಿ ರೈತರಿಗೆ, ಕಾರ್ಮಿರಿಗೆ, ಬಡವರಿಗೆ ಸಾಕಷ್ಟು ಯೋಜನೆ ಘೋಷಣೆ ಮಾಡಿ ಜನ ಸಾಮಾನ್ಯರ ಪ್ರಧಾನಿ ಎಂದು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದರು.

ಜಿಪಂ ಸದಸ್ಯ ಪವನ ಕತ್ತಿ ಮಾತನಾಡಿ ಪ್ರಧಾನಿ ಮೋದಿ ಕಳೆದ ಐದು ವರ್ಷದಿಂದ ಸ್ವಚ್ಛ, ಶುದ್ಧ ಅಭಿವೃದ್ಧಿಯ ಆಡಳಿತ ನೀಡುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ಹಿರಾ ಶುಗರ್ಸ್ ಸದಸ್ಯ ಸುರೇಶ ಬೆಲ್ಲದ, ಹನುಮಂತ ಕರಿಕಟ್ಟಿ, ರಾಮಚಂದ್ರ ಕರಿಕಟ್ಟಿ, ಬಸಲಿಂಗ ಕಾಡೇಶಗೋಳ, ವಿಜಯಕುಮಾರ ಕೋಟಿವಾಲೆ, ನಿಂಗಪ್ಪಾ ಕುರಬರ, ದುಂಡಪ್ಪಾ ಭೆಂಡವಾಡೆ, ಅರ್ಜುನ ಕಮತೆ, ರವೀಂದ್ರ ಆಲೂರೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button