Latest

ಫೆ.12ರಂದು ಸಿದ್ದರಾಮಯ್ಯ ‘ಸಮನ್ವಯ’ ಔತಣ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರಾಜ್ಯ ರಾಜಕೀಯ ತೀವ್ರ ಗೊಂದಲದಲ್ಲಿ ಮುಂದುವರಿಯುತ್ತಿದ್ದಂತೆ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.12ರಂದು ಔತಣಕೂಟ ಏರ್ಪಡಿಸುವ ಮೂಲಕ ಅಚ್ಛರಿ ಮೂಡಿಸಿದ್ದಾರೆ.

12ರಂದು ರಾತ್ರಿ  7 ಗಂಟೆಗೆ ಬೆಂಗಳೂರಿನ  ಹೊಟೆಲ್ ತಾಜ್ ವೆಸ್ಟ್ ಎಂಡ್ ಹೊಟೆಲ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದು, ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿ ಹಂಚುತ್ತಿದ್ದಾರೆ.

ನಾಳೆ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ  ಎನ್ುವ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸರಕಾರವೇ ಬಿದ್ದು ಹೋಗಬಹುದು ಎಂದೂ ವಿಶ್ಲಷಿಸಲಾಗುತ್ತಿದೆ. ಈ ಎಲ್ಲದರ ಮಧ್ಯೆಯೇ ಅವರು ಔತಣ ಕೂಟ ಏರ್ಪಡಿಸಿದ್ದು ಮತ್ತು ಈಗಲೇ ಆ ಕುರಿತ ಆಮಂತ್ರಣ ಪತ್ರಿಕೆ ಹಂಚುತ್ತಿರುವುದು ಕುತೂಹಲ ಮೂಡಿಸಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button