ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ರಂಗ ಸಂಪದ, ರಂಗಾಯಣ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಎಸ್.ಪಿ. ಆಫೀಸ ಹತ್ತಿರವಿರುವ ಕುಮಾರ ಗಂಧರ್ವ ರಂಗಮಂದಿರದಲ್ಲಿ ಫೆ.೧೩, ೧೪ ಹಾಗೂ ೧೫ ರಂದು ಮೂರು ದಿನಗಳ ಕಾಲ ಪ್ರತಿದಿನ ಸಂಜೆ ೬-೩೦ ರಿಂದ ನಾಟಕಗಳ ಪ್ರದರ್ಶನ ನಡೆಯಲಿದೆ. ೧೩ ರಂದು ಡೈನೋಸರ್ ಏಕಾಂಕಿ ಪಯಣ – ಒಂದು ಭವ್ಯ ಪಪೆಟ್ ಶೋ ರೆಕ್ಸ್ ಅವರ್ಸ (ಮಕ್ಕಳಿಗಾಗಿ ವಿಶೇಷ ಪ್ರದರ್ಶನ), ೧೪ ರಂದು ಶ್ರೀಮತಿ ಭಾಗೀರಥಿಬಾಯಿ ಕದಂ ನಿರ್ದೇಶನದ ಯಹೂದಿ ಹುಡುಗಿ ನಾಟಕ ಹಾಗೂ ೧೫ ರಂದು ಆಶಿಫ್ ಪಾತಕ್ ನಿರ್ದೇಶನದ ಪುಂಟಿಲಾ ನಾಟಕ ಪ್ರದರ್ಶನಗೊಳ್ಳಲಿವೆ. ನಾಟಕಗಳಿಗೆ ಉಚಿತ ಪ್ರವೇಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಘದ ಅಧ್ಯಕ್ಷ ಡಾ. ಎ.ಎಲ್. ಕುಲಕರ್ಣಿ ತಿಳಿಸಿದ್ದಾರೆ.