Latest

ಫೆ.25 ರಿಂದ 28 ರವರೆಗೆ ಬೆಳಗಾವಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಭೂಗತ ಕೇಬಲ್ ಅಳವಡಿಕೆ ಕೆಲಸದ ನಿಮಿತ್ತ ಫೆ.೨೫ ರಿಂದ ೨೮ ರವರೆಗೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿದ್ಯುತ್ ನಿಲುಗಡೆ ಪ್ರದೇಶ ಹಾಗೂ ದಿನಾಂಕಗಳು ಹೀಗಿವೆ:
ಫೆ.೨೫ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ : ನಾನಾವಾಡಿ ಏರಿಯಾ, ಅಂಗಡಿ ಕಾಲೇಜು, ಆಶ್ರಯ ವಾಡಿ, ಬಲ್ಲಾವಿಸ್ತಾ ಅಪಾರ್ಟಮೆಂಟ್,  ಅಂಗಡಿ ಕಾಲೇಜು ರಸ್ತೆ, ಗಿಂಡೆ ಕಾಲನಿ ಹಾಗೂ ಶಹಾಪುರ, ವಡಗಾವಿ, ಟಿಳಕವಾಡಿ ಪ್ರದೇಶಗಳಾದ ಭಾರತ ನಗರ, ಲಕ್ಷ್ಮಿ ನಗರ, ಗಣೇಶಪುರ ಗಲ್ಲಿ, ಜೇಡ ಗಲ್ಲಿ, ಅಳವನ ಗಲ್ಲಿ, ಮ೦ಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಜಾರ ಗಲ್ಲಿ, ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ, ಯಳ್ಳೂರ ರೋಡ, ದತ್ತ ಗಲ್ಲಿ, ರಾಜವಾಡಾ ಕ೦ಪೌ೦ಡ್, ಸರ್ವೋದಯ ಕಾಲನಿ, ನಾಜರ ಕ್ಯಾ೦ಪ್, ರಾಮದೇವ ಗಲ್ಲಿ, ವಿಷ್ಣು ಗಲ್ಲಿ, ಶಹಾಪುರ ಗಲ್ಲಿ, ಮೇಘದೂತ ಸೊಸೈಟಿ, ನಾಥ ಪೈ ಸರ್ಕಲ್, ಸರಾಪಗಲ್ಲಿ, ಗೋವಾ ವೇಸ್, ಗೂಡ್ಸ್ ಶೆಡ್ ರೋಡ, ಸೋಮವಾರ ಪೇಟ, ಮಂಗಳವಾರ ಪೇಟ, ಬುಧವಾರ ಪೇಟ, ಗುರುವಾರ ಪೇಟ, ಶುಕ್ರವಾರ ಪೇಟ, ದೇಶಮುಖ ರೋಡ, ಹಿಂದವಾಡಿ, ಖಾನಾಪುರ ರೋಡ.
ಫೆ.೨೬ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ : ಓಂಕಾರ ನಗರ, ಆನಂದ ನಗರ, ಹಿಂದವಾಡಿ, ಭಾಗ್ಯನಗರ ೮ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಪಟವರ್ಧನ ಗಲ್ಲಿ, ಯಳ್ಳೂರು ರಸ್ತೆ, ನಾಜರ ಕ್ಯಾಂಪ್, ನಾಥ ಪೈ ಸರ್ಕಲ್, ಎಂ.ಎಫ್. ರೋಡ, ಗೋವಾವೇಸ್ ಕಾಂಪ್ಲೆಕ್ಸ್, ರಾನಡೆ ಕಾಲನಿ, ಕೋರೆ ಗಲ್ಲಿ.
ಫೆ.೨೭ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ : ಧಾಮಣೆ ರೋಡ, ನಿಜಾಮಿಯಾ ಕಾಲನಿ, ವಿಷ್ಣು ಗಲ್ಲಿ, ಬಜಾರ ಗಲ್ಲಿ ಶಹಾಪುರ ಪೊಲೀಸ್ ಸ್ಟೇಶನ್ ರೋಡ, ರೈತ ಗಲ್ಲಿ, ದತ್ತ ಗಲ್ಲಿ, ವಜೆ ಗಲ್ಲಿ, ಚಾವಡಿ ಗಲ್ಲಿ, ವಡಗಾವಿ ನಾರ್ವೇಕರ ಗಲ್ಲಿ, ನಾಥ ಪೈ ಸರ್ಕಲ್, ಪವಾರ ಗಲ್ಲಿ, ಬಿಚ್ಚು ಗಲ್ಲಿ, ಸರಾಫ ಗಲ್ಲಿ.
ಫೆ.೨೮ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ : ಕುಡತರಕರ ಕಂಪೌಂಡ್, ಶಿವಾಜಿ ಎಂಜಿನಿಯರಿಂಗ, ಪುರಾಣಿಕ ಟಿ.ಸಿ, ಸೋಮವಾರ ಪೇಟ ಹಾಗೂ ಆರ್‌ಪಿಡಿ.

Related Articles

Back to top button