ಪ್ರಗತಿವಾಹಿನಿ ಸುದ್ದಿ, ಹಾವೇರಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಹಾವೇರಿಯಲ್ಲಿ ಜನ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಜನರಿಗೆ ಕನಿಷ್ಠ ಆದಾಯ ನೀಡಲಾಗುವುದು. ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.
ನರೇಂದ್ರ ಮೋದಿ ವಿರುದ್ದ ತಮ್ಮ ಭಾಷಣದುದ್ದಕ್ಕೂ ಹರಿಹಾಯ್ದ ಅವರು, ನಾವು ಮೋದಿಯವರಂತೆ ದಿನಕ್ಕೆ ಮೂರು ರೂ ಕೊಟ್ಟು ನಿಮಗೆ ಅವಮಾನ ಮಾಡುವುದಿಲ್ಲ. ಪ್ರತಿ ತಿಂಗಳು ಕನಿಷ್ಠ ಆದಾಯ ನೀಡುತ್ತೇವೆ ಎಂದರು.
ನರೇಂದ್ರ ಮೋದಿ ಅನಿಲ ಅಂಬಾನಿ, ನೀರವ್ ಮೋದಿ, ವಿಜಯ ಮಲ್ಯರಂತಹ ಕೇವಲ 15 ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಬಡವರ ಹಣವನ್ನು ಈ 15 ಜನರಿಗೆ ನೀಡುತ್ತಿದ್ದಾರೆ. ಭಾರತವನ್ನು ಬಡವರ ಮತ್ತು ಶ್ರೀಮಂತರ ಪ್ರತ್ಯೇಕ ಹಿಂದುಸ್ತಾನ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ನ್ಯಾಯ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.