Kannada NewsLatestNational

ಗಗನಸಖಿ ಕೊಲೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಮುಂಬಯಿಯ: ತರಬೇತಿ ನಿರತ ಗಗನಸಖಿಯನ್ನು ಕೊಲೆಗೈದಿದ್ದ ಆರೋಪಿ ಮುಂಬೈನಲ್ಲಿ ಪೊಲೀಸ್ ವಶದಲ್ಲಿರುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಕ್ರಮ್ ಅತ್ವಾಲ್ ಆತ್ಮಹತ್ಯೆ ಮಾಡಿಕೊಂಡವ. ಛತ್ತೀಸ್ ಗಡ ಮೂಲದ 25ರ ಹರೆಯದ ತರಬೇತಿ ನಿರತ ಗಗನಸಖಿ ರೂಪಾಲ್ ಓಗ್ರೆ ಅವರು ಮುಂಬಯಿಯ ಅಂಧೇರಿಯ ಮರೋಲ್ ನ ಟಾಟಾ ಪವರ್ ಸ್ಟೇಷನ್ ಬಳಿಯ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್ ನಲ್ಲಿ ತಮ್ಮ ಸಹೋದರಿ ಹಾಗೂ ಗೆಳೆಯದೊಂದಿಗೆ ವಾಸವಾಗಿದ್ದರು. ಕಳೆದ ಸೋಮವಾರ (ಸೆ.4) ಅವರನ್ನು ಅದೇ ಫ್ಲ್ಯಾಟ್ ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ತನಿಖೆ ಕೈಗೊಂಡಿದ್ದ ಕೊಲೆಗೈದ ಆರೋಪದಡಿ ವಿಕ್ರಮ್ ಅತ್ವಾಲ್ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ. ಈತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬಯಿ ಪೊಲೀಸ್ ಉನ್ನತಾಧಿಕಾರಿಗಳು ಕರ್ತವ್ಯನಿರತ ಪೊಲೀಸರ ವಿರುದ್ಧ ತನಿಖೆ ಕೈಗೊಂಡಿದ್ದು ಕ್ರಮಕ್ಕೆ ಮುಂದಾಗಿದ್ದಾರೆ.

Home add -Advt

Related Articles

Back to top button