Latest

ಬೆಳಗಾವಿಗೆ ಶನಿವಾರ ಸಿದ್ದರಾಮಯ್ಯ: ಶಿವಾಜಿ ಮೂರ್ತಿ ಲೋಕಾರ್ಪಣೆ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಡೋಲಿ ಗ್ರಾಮ‌ ಪಂಚಾಯಿತಿ ಎದುರು ನಿರ್ಮಿಸಲಾದ ಅಶ್ವಾರೂಢ ಶಿವಾಜಿ ಮೂರ್ತಿಯನ್ನು ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

Home add -Advt

ಬೆಳಗ್ಗೆ 10.45ಕ್ಕೆ ಬೆಂಗಳೂರಿನಿಂದ ಹೊರಟು ವಿಮಾನದ ಮೂಲಕ 12 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುವ ಸಿದ್ದರಾಮಯ್ಯ 1.45ಕ್ಕೆ ಕಡೋಲಿಗೆ ಆಗಮಿಸುವರು. ಕಾರ್ಯಕ್ರಮ ಮುಗಿದ ನಂತರ 4 ಗಂಟೆಗೆ ಹುಬ್ಬಳ್ಳಿಗೆ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ‌ ಮಾಜಿ ಸಚಿವ ಶರದಚಂದ್ರ ಪವಾರ್, ಶಿವಾಜಿ ವಂಶಸ್ಥ, ಮಹಾರಾಷ್ಟ್ರಾ ಎಂಪಿ, ಛತ್ರಪತಿ ಉದಯ‌ನರಾಜೆ ಭೋಸಲೆ, ಸಚಿವ ಸತೀಶ ಜಾರಕಿಹೊಳಿ, ‌ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕ‌ ಗಣೇಶ ಹುಕ್ಕೇರಿ ಮುಖ್ಯ, ತೋಂಟದ ಮಠದ ಸಿದ್ದರಾಮ ಶ್ರೀ, ಕಡೋಲಿ ದುರದುಂಡೇಶ್ವರ್ ವಿರಕ್ತ ಮಠದ ಗುರುಬಸವಲಿಂಗ ಸ್ವಾಮೀಜಿ ಮೊದಲಾದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕುಮಾರಸ್ವಾಮಿ ಹಾಗೂ ಶರದ್ ಪವಾರ ಬರುವುದು ಖಚಿತವಾಗಿಲ್ಲ.

ಮುಂಬೈ ಮೂಲದ ಕಲಾಕಾರ ಜಯಪ್ರಕಾಶ ಅವರು ಅಶ್ವಾರೂಢ ಮೂರ್ತಿ ತಯಾರಿಸಿದ್ದಾರೆ. ಸುಮಾರು ಒಂದು ಕೋಟಿ‌ರೂ. ವೆಚ್ಚದಲ್ಲಿ‌ ಶಿವಾಜಿ ಮಹಾರಾಜರ ಮೂರ್ತಿ ತಯಾರಿಸಲಾಗಿದ್ದು, 12 ಪೋಟ್‌ ಎತ್ತರವಿದೆ ಎಂದು‌ ಜಿಲ್ಲಾ‌ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ, ಪಾಡು ರಂಗಸುಬೆ, ಗ್ರಾಪಂ ಅಧ್ಯಕ್ಷ ರಾಜು ಮಾಯಣ್ಣಾ, ಬಸವಂತ ಮಾಯಾನಾಚೆ, ಗಜಾನನ ಕಾಗನೇಕರ, ಓಮಾನಿ ಚೌಗಲೇ , ವಿನೋಂದ ಜಗಮಳೆ, ಪುಂಡಲೀಕ ಬಾತಕಾಂಡೆ, ಸಾಗರ ಪಡಕೆ, ದತ್ತಾ ಸುತಾರಾ,ಕಲ್ಲಾ ಬಸರಿಕಟ್ಟಿ ಸೇರಿದಂತೆ ಇತರರು ಇದ್ದರು.

Related Articles

Back to top button