Latest

ಹೆಂಡತಿಯನ್ನು ಕೊಂದ ಆರೋಪದಲ್ಲಿ ಜೈಲು ಪಾಲಾದ ಪತಿ; ಪ್ರಿಯತಮನೊಂದಿಗೆ ಆರಾಮವಾಗಿ ಬದುಕು ಸಾಗಿಸುತ್ತಿದ್ದ ಕೊಲೆಯಾದ ಪತ್ನಿ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಪತ್ನಿಯನ್ನು ಹತ್ಯೆಗೈದ ಆರೋಪದ ಮೇಲೆ ಪತಿಯೊಬ್ಬ ಜೈಲು ಶಿಕ್ಷೆ ಅನುಭವಿಸಿದ್ದು, ಆದರೆ ಕೊಲೆಯಾದ್ದಾಳೆ ಎನ್ನಲಾಗಿದ್ದ ಪತ್ನಿ ಅತ್ತ ತನ್ನ ಪ್ರಿಯತಮನೊಂದಿಗೆ ಜಾಲಿಯಾಗಿ ಓಡಾಡಿಕೊಂಡಿದ್ದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ಬೆಳಕಿಗೆ ಬಂದಿದೆ.

ಬಿಹಾರದ ಮೋತಿಹಾರಿ ಜಿಲ್ಲೆಯ ಲಕ್ಷ್ಮಿಪುರ ನಿವಾಸಿ ದಿನೇಶ್ ರಾಮ್ ಎಂಬಾತ 2016, ಜೂನ್ 14ರಂದು ಶಾಂತಿ ದೇವಿ ಎಂಬಾಕೆಯನ್ನು ವಿವಾಹವಾಗಿದ್ದ. ಮದುವೆಯಾದ ವರ್ಷದಲ್ಲೇ ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆ ಪಂಜಾಬ್ ನಲ್ಲಿ ವಾಸವಾಗಿದ್ದಳು.

ಮಹಿಳೆ ನಾಪತ್ತೆಯಾದ ಬಳಿಕ ತಮ್ಮ ಮಗಳನ್ನು ವರದಕ್ಷಿಣೆ ಕಿರುಕುಳ ನೀಡಿ ಪತಿ ಹತ್ಯೆಗೈದಿದ್ದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಆರೋಪಿ ದಿನೇಶ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಆದರೆ ಶಾಂತಿಯ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದರು. ಶಾಂತಿಯ ಮೊಬೈಲ್ ಲೊಕೇಷನ್ ಪತ್ತೆಯಾಗುತ್ತಿದ್ದಂತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಕೊಲೆಯಾಗಿದ್ದಾಳೆ ಎಂದು ಹೇಳಲಾಗಿದ್ದ ಮಹಿಳೆ ತನ್ನ ಪ್ರಿಯತಮನೊಂದಿಗೆ ಪಂಜಾಬ್ ನ ಜಲಂಧರ್ ನಲ್ಲಿ ವಾಸವಾಗಿದ್ದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

Home add -Advt

ನಿಶ್ಚಿತಾರ್ಥಕ್ಕೆ ಬಟ್ಟೆ ತರಲು ಹೊರಟಿದ್ದ ವೇಳೆ ಭೀಕರ ಅಪಘಾತ; ಯುವಕ ದುರ್ಮರಣ

Related Articles

Back to top button