Latest

ದಶಕದ ಪ್ರೀತಿ; ತಾಳಿ ಕಟ್ಟುವ ವೇಳೆ ವರ ಪರಾರಿ!

ಪ್ರಗತಿವಾಹಿನಿ ಸುದ್ದಿ; ಉಡುಪಿ: 13 ವರ್ಷಗಳಿಂದ ಪ್ರೀತಿಸಿ ಮನೆಯವರನ್ನೆಲ್ಲ ಒಪ್ಪಿಸಿ ಭರ್ಜರಿ ಮದುವೆ ಸಿದ್ಧತೆ ನಡೆಸಿ, ಇನ್ನೇನು ತಾಳಿಕಟ್ಟಬೇಕಾದ ಸಮಯದಲ್ಲಿ ಯುವಕ ಕೈಕೊಟ್ಟು ಪರಾರಿ ಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಹ್ಯಾಂಗ್ಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಪಾಲದ ಮಮತಾ ಹಾಗೂ ಗಣೇಶ್ ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರೆಲ್ಲ ಸೇರಿ ಇನ್ನೇನು ಮದುವೆ ಮಾಡಿಸಬೇಕು ಎನ್ನುವಷ್ಟರಲ್ಲಿ ನ.4ರಂದು ಗಣೇಶ್ ಬೇರೆ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ.

ವಿಷಯ ತಿಳಿದ ಮಮತಾ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಮದುವೆ ನಿಲ್ಲಿಸಿ, ನ.6ಕ್ಕೆ ಮಮತಾ ಜೊತೆ ಮದುವೆ ಫಿಕ್ಸ್ ಮಾಡಿದ್ದಾರೆ. ಇದಕ್ಕೆ ಯುವಕ ಒಪ್ಪಿದ್ದರಿಂದ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮದುವೆಯ ಎಲ್ಲಾ ಶಾಸ್ತ್ರಗಳನ್ನು ಮುಗಿಸಿ ಯುವತಿಯನ್ನು ಚಪ್ಪರಕ್ಕೆ ಕರೆ ತರುತ್ತಿದ್ದಂತೆಯೇ ಯುವಕ ಪರಾರಿಯಾಗಿದ್ದಾನೆ. ಒಂದು ದಿನ ಕಳೆದರೂ ಯುವಕ ಗಣೇಶ್ ನ ಪತ್ತೆ ಇಲ್ಲದಿದ್ದಾಗ ಯುವತಿ ಮಮತಾ ಇದೀಗ ಆತನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

 

Home add -Advt

Related Articles

Back to top button