Latest

ಬೆಳಗಾವಿ ಗ್ರಾಮೀಣ ಕ್ಷೇತ್ರದ 62 ಕೆರೆಗಳಿಗೆ ನೀರು ತುಂಬಿಸಲು 380 ಕೋಟಿ ರೂ. -ಲಕ್ಷ್ಮಿ ಹೆಬ್ಬಾಳಕರ್ ಸಾಧನೆ

ಪ್ರಗತಿವಾಹಿನಿ ಎಕ್ಸಕ್ಲೂಸಿವ್

ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸಿದ 

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಮತ್ತು ಸಾಂಬ್ರಾ ಹೋಬಳಿಗಳ 62 ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರೆತ್ತುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, 379.92 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟೂ 47 ಹಳ್ಳಿಗಳ 62 ಕೆರೆಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸಿದಂತಾಗಿದೆ.

ಹಿರೇಹಟ್ಟಿಹೊಳಿ ಗ್ರಾಮದ ಸಮೀಪ ಜಾಕ್ ವೆಲ್ ಮತ್ತುಪಂಪ್ ಹೌಸ್ ನಿರ್ಮಿಸಿ, ಮಲಪ್ರಭಾ ನದಿಯಿಂದ 0.469 ಟಿಎಂಸಿ ನೀರನ್ನೆತ್ತಿ ಈ ಕೆರೆಗಳನ್ನು ತುಂಬಿಸಲಾಗುತ್ತದೆ. ಈ ಹಳ್ಳಿಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವುದರಿಂದ ಅಂತರಜಲ ಮಟ್ಟ ಕುಸಿದು ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ.  ಹಾಗಾಗಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ಈ ನೀರನ್ನು ಬಳಸಲು ತೀರ್ಮಾನಿಸಲಾಗಿದೆ.

Home add -Advt

ಈ ಯೋಜನೆಗೆ 2018-19ರ ಸಾಲಿನಲ್ಲಿ ಮೂರನೇ ಒಂದು ಭಾಗ ಅನುದಾನ ಒದಗಿಸಲಾಗಿದ್ದು, ಮುಂದಿನ ಆಯವ್ಯಯದಲ್ಲಿ ಉಳಿದಿರುವ ಅನುದಾನ ಒದಗಿಸುವ ಭರವಸೆ ನೀಡಲಾಗಿದೆ. ಕಳೆದ ಆಗಸ್ಟ್ ನಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಸಭೆಯಲ್ಲೇ ಈ ಯೋಜನೆಯ ಪ್ರಸ್ತಾಪವಿಡಲಾಗಿತ್ತು. ಇದೀಗ ಯೋಜನೆ ರೂಪಿಸಿ ಮಂಜೂರಾತಿ ನೀಡಲಾಗಿದೆ. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯವಿದೆ, ಆದರೆ ಗ್ರಾಮೀಣ ಕ್ಷೇತ್ರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಸುವರ್ಣ ವಿಧಾನಸೌಧವೇ ಗ್ರಾಮೀಣ ಕ್ಷೇತ್ರದಲ್ಲಿದೆ, ಆದರೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಎರಡು ವಿಶ್ವವಿದ್ಯಾಲಯಗಳು ಗ್ರಾಮೀಣ ಕ್ಷೇತ್ರದಲ್ಲಿವೆ, ಆದರೆ ಗ್ರಾಮೀಣ ಕ್ಷೇತ್ರದ ಜನರಿಗೆ ಸರಿಯಾದ ಸಿಕ್ಷಣ ಸಂಸ್ಥೆಗಳಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ಮೊದಲಿನಿಂದಲೂ ತೀವ್ರ ಅಸಮಾಧಾನ ಹೊಂದಿದ್ದರು. ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದರು. ಈಗ ಆ ದಿಸೆಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ.

Related Articles

Back to top button