ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ನಿರ್ದೇಶಕರಾಗಿ ನಾಲ್ವರು ಪಾಲಿಕೆ ಸದಸ್ಯರನ್ನು ನೇಮಕ ಮಾಡಲಾಗಿದೆ.
ಪುಷ್ಪಾ ಪರ್ವತರಾವ್, ದಿನೇಶ ನಾಶಿಪುಡಿ, ಅನಂತ ದೇಶಪಾಂಡೆ ಹಾಗೂ ಪಂಡರಿ ಪರಬ್ ಅವರು ನಿರ್ದೇಶಕರಾಗಿ ನೇಮಕಗೊಂಡವರು.
ಮೇಯರ್ ಬಸಪ್ಪ ಚಿಕ್ಕಲದಿನ್ನಿ ಶಿಫಾರಸ್ಸಿನಂತೆ ಈ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಅಸ್ಥಿತ್ವಕ್ಕೆ ಬಂದಾಗಲೇ ಈ ನೇಮಕ ಮಾಡಬೇಕಿತ್ತು. ಆದರೆ ಪಾಲಿಕೆಯ ಸದಸ್ಯರ ಅವಧಿ ಮುಗಿಯುವ ಹೊತ್ತಿಗೆ ನೇಮಕ ಮಾಡಲಾಗಿದೆ. ಸದಸ್ಯರ ಅವಧಿ ಮುಗಿಯುತ್ತಿದ್ದಂತೆ ಈ ಹುದ್ದೆಯೂ ಮುಗಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ