ಪ್ರಗತಿವಾಹಿನಿ ಸುದ್ದಿ, ಮಂಡ್ಯ
ಶ್ರೀನಗರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗುಡಿಗೇರಿ ಗ್ರಾಮದ ಯೋಧ ಎಚ್. ಗುರು(33) ಹುತಾತ್ಮರಾಗಿದ್ದಾರೆ. ಹೊನ್ನಯ್ಯ, ಚಿಕ್ಕಹೊಳ್ಳಮ್ಮ ದಂಪತಿ ಪುತ್ರರಾಗಿದ್ದ ಅವರು, 8 ತಿಂಗಳ ಹಿಂದೆ ಕನಕಪುರ ತಾಲೂಕಿನ ಸಾಸಲಾಪುರ ಗ್ರಾಮದ ಕಲಾವತಿಯನ್ನು ವಿವಾಹವಾಗಿದ್ದರು. ಮದುವೆ ನಂತರ ಹೆಂಡತಿಯನ್ನು ತವರಿನಲ್ಲಿಯೇ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು.
ಗುರು ಅವರ ತಂದೆ ಊರಲ್ಲಿ ಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಡತನದ ನಡುವೆ ಬೆಳೆದು ಬಂದಿರೋ ಗುರು ರಜೆ ಮುಗಿಸಿಕೊಂಡು ಗುರುವಾರವಷ್ಟ ಕೆಲಸಕ್ಕೆ ಹಾಜರಾಗಿದ್ದರು. ವಿಧಿಯಾಟ ವಾರದ ಹಿಂದೆ ಮನೆಯವರ ಜೊತೆ ಇದ್ದ ಗುರು ಉಗ್ರರ ದಾಳಿಗೊಳಗಾಗಿ ವೀರಮರಣ ಹೊಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ