
ಪ್ರಗತಿವಾಹಿನಿ ಸುದ್ದಿ; ಮೀರತ್: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಮೀರತ್ ನ ಕಂಕರ್ ಖೇಡಾ ಪ್ರದೇಶದ ಕಾಸಿಂಪುರ್ ಗೇಟ್ ಬಳಿ ನಡೆದಿದೆ.
ರೈಲ್ವೆ ಗೇಟ್ ನಲ್ಲಿ ಆಟೋ ಹಳಿ ದಾಟುತ್ತಿದ್ದಾಗ ಏಕಾಏಕಿ ವಂದೇ ಭಾರತ್ ರೈಲು ಆಗಮಿಸಿದೆ. ಆಟೋಗೆ ರೈಲು ಡಿಕ್ಕಿ ಹೊಡೆದಿದ್ದು, ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಕಂಕರಖೇಡದ ನರೇಶ್ ಎಂಬುವವರು ಆಟೋದದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಗೆ ಹೋಗುತ್ತಿದ್ದರು. ನರೇಶ್ ಆಟೋ ಓಡಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಆಟೋದಲ್ಲಿ ಹಿಂದೆ ಕುಳಿತಿದ್ದರು. ರೈಲ್ವೇ ಗೇಟ್ ಬಳಿ ಆಟೋಗೆ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ಹಾಗೂ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.