ಪ್ರಗತಿವಾಹಿನಿ ಸುದ್ದಿ, ನೇಗಿನಹಾಳ :
ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಚಾರಿಕತೆ ಬಿತ್ತಿ, ಸರ್ವ ಜನಾಂಗದ ಏಳಿಗೆ ಬಯಸಿ ನಾಡಿನ ಜನರ ಮೌಢ್ಯ ನಿವಾರಣೆ ಮಾಡಿ ಸಮಾನತೆಯ ಮಂತ್ರ ಹಾಡಿ ಪ್ರತಿಯೊಬ್ಬರ ಜೀವನದ ಬಂಡಿ ಸಾಗಿಸಿದ ಮಹಾತಪಸ್ವಿ ಮಹಾಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಹಾರಥೋತ್ಸವ ಇಂದು ನಡೆಯಿತು.
ಗ್ರಾಮದಲ್ಲಿ ಜಾತಿ-ವರ್ಣ-ವರ್ಗ, ಲಿಂಗ ಬೇದ-ಭಾವ ಮರೆತು ಪೀಠಾಧಿಪತಿ ಬಸವ ಸಿದ್ಧಲಿಂಗ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಅದ್ದೂರಿಂದ ನೇರವೇರಿದ ರಥೋತ್ವದಲ್ಲಿ ಗರಗ ಮಡಿವಾಳೇಶ್ವರ ಮಠದ ಪೀಠಾಧಿಪತಿ ಚನ್ನಬಸವ ಮಹಾಸ್ವಾಮೀಜಿಗಳು ಹಾಗೂ ಶಿರಸಂಗಿ ಬಸವ ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಸತತ ಐದು ದಿನಗಳ ಕಾಲ ನಡೆದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ೧೩೮ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಅಡಿವೆಪ್ಪ ಮಹಾಸ್ವಾಮಿಗಳ ೧೩ನೆಯ ಸ್ಮರಣೋತ್ಸವದ ನಿಮಿತ್ತ ಪ್ರತಿದಿನ ಪ್ರವಚನ, ಅನುಭಾವ, ಸುತ್ತಮೂತ್ತಲಿನ ಗ್ರಾಮದ ಭಜನಾ ತಂಡಗಳಿಂದ ರಾತ್ರಿ ಇಡಿ ಭಜನೆ, ಮುಂಜಾನೆ ಶಿವಯೋಗ, ಇಷ್ಠಲಿಂಗ ದೀಕ್ಷಾ ಕಾರ್ಯಕ್ರಮ ಜರುಗಿದವು. ನಂತರ ಮಧ್ಯಾಹ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕಿ ಉತ್ಸವ ಜರುಗಿತು.
ಕೊನೆಯ ದಿನವಾದ ಶುಕ್ರವಾರ ಸಂಜೆ ನೇಗಿನಹಾಳ, ಕೆಸರಕೊಪ್ಪ, ಕುರಗುಂದ, ಹೊಳಿಹೊಸುರ, ಯರಡಾಲ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿ ಭಕ್ತಿ-ಭಾವದಿಂದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ರಥ ಎಳೆದು ಜೀವನ ತಮ್ಮ ಬಂಡಿಯನ್ನು ಎಳೆಯುವ ಶಕ್ತಿ ನೀಡು ಶಿವನೇ ಎಂದು ಸ್ಮರಿಸಿದರು. ರಥೋತ್ಸವ ಬರುವ ಬೀದಿಯುದ್ದಕ್ಕೂ ಗ್ರಾಮಸ್ಥರು ನೀರು ಸುರಿದು ಪ್ರಸಾದ ನೀಡಿದರು. ರಥೋತ್ಸವ ಕಾರ್ಯಕ್ರಮದಲ್ಲಿ ಭಜನೆ, ಕರಡಿ ಮಜಲು, ಬ್ಯಾಂಡ್ ಬಾಜಿಗೆ ಯುವಕರು ಹೆಜ್ಜೆ ಹಾಕಿದ್ದು ನೋಡುಗರ ಮನಸೆಳೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ