Latest

ಮನಕುಲದ ಸೇವೆಯಿಂದ ಜೀವನದಲ್ಲಿ ನೆಮ್ಮದಿ – ಡಿ.ಸುರೇಂದ್ರಕುಮಾರ ಹೆಗ್ಗಡೆ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾನವ ಕುಲದ ಸೇವೆಯೇ ಸರ್ವಶಕ್ತವಾದ ಸೇವೆಯಾಗಿದೆ. ಮನಕುಲದ ಸೇವೆಯಿಂದ ಜೀವನದಲ್ಲಿ ನೆಮ್ಮದಿ ಕಾಣಬಹುದು. ಸರ್ವರಿಗೂ ಸಮಬಾಳು ಇದ್ದರೆ ಮಾತ್ರ ಮನಕುಲದ ಉನ್ನತಿ ಹೊಂದಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಧರ್ಮಸ್ಥಳದ ಡಿ.ಸುರೇಂದ್ರಕುಮಾರ ಹೆಗ್ಗಡೆ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಬೆಳಗಾವಿಯ ಮಹಾವೀರ ಭವನದಲ್ಲಿ ಜೈನ ಸಮಾಜದ ವಿವಿಧ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವ ಸೇವೆ ಈಶ ಸೇವೆ ಎಂಬ ವಿಶ್ವಾಸದಿಂದ ಸಾಮಾಜಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದರಿಂದ ಇಂದು ತಮಗೆ ಈ ಪ್ರಶಸ್ತಿ ಲಭಿಸಿದೆ. ನನ್ನ ಸೇವೆಗೆ ನಮ್ಮ ಸಹೋದರ ಡಾ. ವಿರೇಂದ್ರ ಹೆಗ್ಗಡೆ ಅವರ ಪ್ರೇರಣೆಯೇ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬೆಳಗಾವಿಯ ಸಮಸ್ತ ಜೈನ ಸಮಾಜದ ಪರವಾಗಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಪುಷ್ಪದಂತ ದೊಡ್ಡಣ್ಣವರ, ರಾಜೀವ ದೊಡ್ಡಣ್ಣವರ, ರಾಜೇಂದ್ರ ಜೈನ, ಸೆವಂತಿಲಾಲ ಶಹಾ, ಬಾಳಾಸಾಹೇಬ ಪಾಟೀಲ, ಗೋಪಾಲ ಜಿನಗೌಡ ಮೊದಲಾದವರು ಡಿ.ಸುರೇಂದ್ರಕುಮಾರ ಹೆಗ್ಗಡೆ ಅವರನ್ನು ಸನ್ಮಾನಿಸಿದರು.
ವಿವಿಧ ಜೈನ ಸಂಘಟನೆಗಳು, ವಿವಿಧ ಮಹಿಳಾ ಮಂಡಳಗಳಿಂದ ಸಹ ಸನ್ಮಾನ ನಡೆಯಿತು. ಪುಷ್ಪಕ ಹನಮಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ವಿನೋದ ದೊಡ್ಡಣ್ಣವರ ಪರಿಚಯಿಸಿದರು. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button