ಪ್ರಗತಿವಾಹಿನಿ ಸುದ್ದಿ, ಮುಂಬೈ
ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆ ಕೊನೆಗೂ ಮೈತ್ರಿ ಮಾಡಿಕೊಂಡಿವೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆರಡರಲ್ಲೂ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಉಪಸ್ಥಿತಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿ ಘೋಷಿಸಿದರು.
ಲೋಕಸಭೆಯ ಒಟ್ಟೂ 48 ಸ್ಥಾನಗಳಲ್ಲಿ ಬಿಜೆಪಿ 25ರಲ್ಲಿ ಹಾಗೂ ಶಿವಸೇನೆ 23ರಲ್ಲಿ ಸ್ಪರ್ಧಿಸಲಿವೆ. ವಿಧಾನಸಭೆ ಚುನಾಣೆಯಲ್ಲಿ 50:50 ಸ್ಥಾನ ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದಾಗಿ, ಕಳೆದ ಹಲವು ತಿಂಗಳಿನಿಂದ ನಡೆಯುತ್ತಿದ್ದ ಹಗ್ಗ ಜಗಗಾಟ ಅಂತ್ಯವಾದಂತಾಗಿದೆ.
ಬಿಜೆಪಿ ಮತ್ತು ಶಿವಸೇನೆ ಎರಡೂ ಪಕ್ಷಗಳ ಧ್ಯೇಯ ಒಂದೆ ಆಗಿದೆ. ಹಲವು ಸಂದರ್ಭಗಳಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಹಾಗಾಗಿ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಲಾಗಿದೆ ಎಂದರು ಅಮಿತ್ ಷಾ.