ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೋಡಿಯ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಬೆಂಗಳೂರಿನ ಸಿವಿಲ್ ನ್ಯಾಯಾಧಿಶೆ ಪುಷ್ಪಾ ಜೊಗೊಜಿ, ಇಂದಿನ ನಾರಿಯರು ಶೈಕ್ಷಣಿಕವಾಗಿ ಮುಂಚುಣಿಯಲ್ಲಿದ್ದು, ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಸರಿಯಾದ ರೀತಿಯಲ್ಲಿ ತರಬೇತಿ ಪಡೆದುಕೊಂಡು ಜೀವನದಲ್ಲಿ ಯಶಸ್ವಿಯಾಗಲು ಸಲಹೆ ನೀಡಿದರು. ವಿವಾಹ ನಂತರ ಸುಮ್ಮನಿರದೆ ಕಾರ್ಯೋನ್ಮುಖರಾಗುವುದು ಅವಶ್ಯಕವಾಗಿದೆ ಎಂದರು.
ಮಹಿಳೆಯರು ತಮ್ಮ ವೃತ್ತಿಯಲ್ಲಿ ಯಶಸ್ವಿಗೊಂಡರೆ ಸಬಲಿಕರಣ ಸಾಧ್ಯ ಎಂದರು. ಜೊತೆಗೆ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಭಾರತೀಯ ಮಹಿಳೆ ತನ್ನ ಸಬಲಿಕರಣಕ್ಕೆ ಹಂಬಲಿಸಿದವಳಲ್ಲ, ಅದು ಅವಳ ಹಕ್ಕು. ಸಮಾಜದಲ್ಲಿ ಎಲ್ಲವೂ ನ್ಯಾಯಯುತವಾಗಿದ್ದರೆ ಮಹಿಳೆಯರು ಸಹಿಷ್ಣರಾಗಿರುವುದು ಒಳಿತು. ಆದರೆ ಅನ್ಯಾಯ , ದೌರ್ಜನ್ಯವನ್ನು ಸಹಿಸಿಕೊಳ್ಳುವುದು ಸರಿಯಲ್ಲ ಎಂದರು.
ಕೇವಲ ಖಾಸಗಿ ನೌಕರಿಯ ಬೆನ್ನುಹತ್ತದೇ, ತಮ್ಮದೇ ಆದ ಉದ್ಯೋಗ ಸ್ಥಾಪಿಸುವತ್ತ ಗಮನ ಹರಿಸಬೆಕೆಂದರು, ಜೊತೆಗೆ ಸರ್ಕಾರಿ ವಲಯದಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಬೆಕೆಂದರು.
ಅಂತರಾಷ್ಟ್ರೀಯ ಬೆಸ್ಟ ಲಿಡರ್ ಪ್ರಶಸ್ತಿ ವಿಜೇತೆ ವಿಮಲಾ ಕದಮ, ಮಾತನಾಡಿ, ವಿದ್ಯಾರ್ಥಿನಿಯರು ತಮ್ಮನ್ನು ಕೇವಲ ಕಲಿಕೆಗೆ ಸಿಮಿತಗೊಳಿಸಿಕೊಳ್ಳದೇ, ಸಮಾಜದಲ್ಲಿನ ಹಿಂದುಳಿದ ವರ್ಗದವರಿಗೆ ಸಹಾಯ ಹಸ್ತ ಚಾಚಲೂ ಸೂಚಿಸಿದರು. ನಿಮ್ಮ ಜೊತೆಗೆ ಬೇರೆಯವರು ಸಹಿತ ಬೆಳೆಯಬೇಕೆಂಬ ಹಂಬಲವಿರಲಿ. ಇಂದು ಪರಿಸರ ಮಾಲಿನ್ಯ ಜಾಸ್ತಿಯಾಗಿದ್ದೂ, ಪ್ರತಿಯೊಬ್ಬರೂ ಸಸಿ ನೆಡಲು ಮುಂದಾಗಿ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ, ಈ ಜಗತ್ತಿಗೆ ದೇವರು ನೀಡಿದ ಅದ್ಭುತ ಕಾಣಿಕೆ ಮಹಿಳೆ. ಮಹಿಳೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಕುಟುಂಬದ ಖುಷಿಯನ್ನು ಹೆಚ್ಚಿಸುತ್ತಾಳೆ. ಯಾವುದೇ ಒತ್ತಡದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ ಮಹಿಳೆ ಹೊಂದಿದ್ದಾಳೆ. ಭಾರತೀಯ ಗೃಹಿಣಿಯನ್ನು ತುಚ್ಛವಾಗಿ ಕಾಣದಿರಿ, ಮಹಿಳೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಆಧಾರಸ್ಥಂಬವಾಗಿದ್ದು, ಜಗತ್ತು ಸಹ ಅವಳನ್ನು ಗೌರವಿಸುತ್ತದೆ. ಹೆಣ್ಣುಮಕ್ಕಳು ಸಹಿತ ತಮ್ಮ ತಂದೆ-ತಾಯಿಯರ ಪಾಲನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಮಹಿಳಾ ಘಟಕದ ಸಂಯೋಜಕರಾದ ಪ್ರೊ. ರಿಜ್ವಾನಾ ಬೇಗಮ ವಾರ್ಷಿಕ ವರದಿ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಹಾಗೂ ಇತರೇ ಸಾಧನೆಗೈದ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಜೊತೆಗೆ ಮಹಿಳಾ ಅಟೆಂಡರ್ ಹಾಗೂ ರಿಕ್ಷಾ ಚಾಲಕನನ್ನು ಸತ್ಕರಿಸಲಾಯಿತು.
ಸೀಫಾ ಪಟ್ಟೇಕರ ಸ್ವಾಗತಿಸಿದರು. ಐಶ್ವರ್ಯ ಮತ್ತು ಪ್ರೇಮಾ ಅಥಿತಿಗಳನ್ನು ಪರಿಚಯಿಸಿದರು. ಮೆಘನಾ ಮತ್ತು ಲಕ್ಷ್ಮಿ ಸ್ವಾಗತ ಗೀತೆಯನ್ನು ಹಾಡಿದರು. ಅಶ್ವಿನಿ ತಳವಾರ ಮತ್ತು ಶಿಲ್ಪಾ ವಾರದ ನಿರೂಪಿಸಿದರು. ಸುಶ್ಮಿತಾ ಉಮದಿ ವಂದಿಸಿದರು.
ಮಹಿಳಾ ಘಟಕದ ಅಧ್ಯಕ್ಷರಾದ ಪ್ರೊ.ಅಶ್ವಿನಿ ಗವಳಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.