Latest

ಮಹಿಳೆಯ ಸಮರ್ಪಣ ಭಾವನೆ ಮತ್ತು ತ್ಯಾಗದ ಮುಂದೆ ಎಲ್ಲರೂ ತಲೆ ಬಾಗುತ್ತಾರೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಮಾಸ್ತಮರಡಿ ಗ್ರಾಮದಲ್ಲಿ ಬ್ರಹ್ಮಾಕುಮಾರೀಸ್ ಗೀತಾ ಪಾಠಶಾಲೆ ಮಾಸ್ತಮರಡಿ ಹಾಗೂ ಗ್ರಾಮ ಪಂಚಾಯತ ಮಾಸ್ತಮರಡಿ ಇವರ ವತಿಯಿಂದ ಅಂತಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ದೀಪ ಬೆಳಗಿಸಿ ಮಾತನಾಡಿದ ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾ, ಭಾರತದ ಮಹಿಳೆಯರಲ್ಲಿ ಸಮರ್ಪಣ ಭಾವನೆ ಮತ್ತು ಪತಿವೃತದ ವಿಶೇಷತೆ ಸರ್ವೆ ಸಾಮಾನ್ಯವಾಗಿತ್ತು. ಆಕೆಯ ಸಮರ್ಪಣ ಭಾವನೆ ಮತ್ತು ತ್ಯಾಗದ ಮುಂದೆ ಎಲ್ಲರೂ ತಲೆ ಬಾಗುತ್ತಾರೆ. ಆಕೆಯಲ್ಲಿರುವ ಅಪಾರವಾದ ತಾಳ್ಮೆಯಿಂದಲೇ ಪರಿವಾರದ ಎಲ್ಲ ಸದಸ್ಯರು ಪರಸ್ಪರ ಸಹಕಾರದ ಭಾವನೆಯಿಂದ ಬಾಳುತ್ತಾರೆ. ಇದರಿಂದ ಮಹಿಳೆಯರ ಹೆಸರು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ ಎಂದರು.

ಎಲ್ಲಿ ನಾರಿಯರನ್ನು ಗೌರವಿಸುತ್ತಾರೊ ಅಲ್ಲಿ ದೇವತೆಗಳು ವಿಹರಿಸುತ್ತಾರೆ. ಸತ್ಯ ಯುಗದಲ್ಲಿ ಇದೇ ಭಾರತವು ದೇವಿ ದೇವತೆಗಳ ರಾಜ್ಯವಾಗಿತ್ತು. ಅಲ್ಲಿ ಸ್ತ್ರೀಯರಿಗೆ ಗೌರವವಿತ್ತು. ಆದ್ದರಿಂದ ಮಹಿಳೆಯರು ಕೂಡ ದಿವ್ಯ ಗುಣಗಳಿಂದ ಸಂಪನ್ನರಾಗಿ ಮತ್ತು ಬೇರೆಯವರಲ್ಲಿಯೂ ದಿವ್ಯಗುಣಗಳನ್ನು ತುಂಬಲು ನಿಮಿತ್ತರಾಗಿ ಎಂದರು.
ಅತಿಥಿಯಾಗಿ ಆಗಮಿಸಿದ ಮಾಸ್ತಮರಡಿ ಪ್ರೌಢ ಶಾಲೆ ಪ್ರಧಾನ ಗುರುಗಳಾದ ಎಮ್.ಎಸ್. ಮೇದಾರ ಮಾತನಾಡುತ್ತಾ, ವರ್ತಮಾನ ಸಮಯದಲ್ಲಿ ಮನುಷ್ಯರು ವಿಜ್ಞಾನದ ಮೂಲಕ ಎಲ್ಲವನ್ನು ಅನುಭವ ಮಾಡುತ್ತಿದ್ದಾರೆ. ಆದರೆ ಶಾಂತಿಯ ಅನುಭದಿಂದ ದೂರ ಇದ್ದಾರೆ. ಮಾನಸಿಕವಾಗಿ ಶಾಂತಿ ಸಿಗಬೇಕಾದರೆ ಅಧ್ಯಾತ್ಮಿಕ ಚಿಂತನೆ ಮತ್ತು ಧ್ಯಾನದ ಅರಿವು ಪ್ರತಿ ಒಬ್ಬರಿಗೂ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಶಾಂತಿ ಸಿಗಬೇಕಾದರೆ ಓದಿನಲ್ಲಿ ಮನ ಪೂರ್ವಕವಾಗಿ ಗಮನ ಕೊಡಬೇಕಾಗಿದೆ. ಒಬ್ಬ ಮಹಿಳೆ ಪ್ರಜ್ಞಾವಂತಳಾದರೆ ಒಂದು ಸಾವಿರ ಶಾಲೆ ತೆರೆದಂತೆ ಎಂದರು.
ರಾಜಯೊಗಿನಿ ಬ್ರಹ್ಮಾಕುಮಾರಿ ಮಿನಾಕ್ಷಿ ಮಾತನಾಡುತ್ತಾ, ಮಹಳೆ ಅಬಲೆ ಅಲ್ಲ ಸಬಲೆ. ಆದುದರಿಂದ ವಾಸ್ತಲ್ಯಮಯ ಮಾತೆಯರೆ, ನೀವೇ ಮನಕುಲದ ಪ್ರಥಮ ಗುರು – ಜಗಜ್ಜನನಿ ಎಂಬ ತಮ್ಮ ಶ್ರೇಷ್ಠವಾದ ಮಹಿಮೆ ಎಂದಿಗೂ ಮರೆಯಬೇಡಿ.  ಮಹಿಳೆಯರಿಂದಲೇ ಜಗತ್ತು ಕಲ್ಯಾಣವಾಗುವುದು ಎಂದರು.
ಸಂಸ್ಥೆಯ ಪರಿಚಯವನ್ನು ಬಿ.ಕೆ. ಮಹಾದೇವ ನೀಡಿದರು ಕಾರ್ಯಕ್ರಮದಲ್ಲಿ  ಮಹಾಂತೇಶಗೌಡಾ ಪಾಟೀಲ, ಸುರೇಶಗೌಡಾ ಪಾಟೀಲ, ಮಹಾನಂದ ಮರಕಟ್ಟಿ,  ಲಕ್ಷ್ಮೀ ತೇರೆಕರ, ಬಸವರಾಜ ತೊರ್ಲೆ, ಬಿ.ಆರ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಸುರೇಶ ಪತ್ತಾರ ಸ್ವಾಗತಿಸಿದರು, ಬಿ.ಕೆ ಶ್ರೀಕಾಂತ ನಿರೂಪಿಸಿದರು, ಯಲ್ಲಪ್ಪ ಪರಾಂಡೆ ವಂದಿಸಿದರು.

Home add -Advt

Related Articles

Back to top button