Kannada NewsKarnataka NewsLatest

58 ಲಕ್ಷ ರೂ ಮೊತ್ತದಲ್ಲಿ ಅಥಣಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಪ್ಲಾಂಟ್ – ಡಿಸಿಎಂ ಸವದಿ

 ಪ್ರಗತಿವಾಹಿನಿ ಸುದ್ದಿ, ಅಥಣಿ – ಒಂದು ನಿಮಿಷಕ್ಕೆ 250 ಲೀಟರ್* ಸಾಮರ್ಥ್ಯದ ಆಕ್ಸಿಜನ್ ಉತ್ಪಾದನೆ ಮಾಡುವಂತಹ ಪ್ಲಾಂಟ್ ಒಂದನ್ನು ಸ್ನೇಹಿತರ ಸಹಕಾರದೊಂದಿಗೆ 58 ಲಕ್ಷ ರೂಪಾಯಿಗಳ ಮೊತ್ತದಲ್ಲಿ ಉಚಿತವಾಗಿ ಅಥಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಉಪಮುಖ್ಯಮಂತ್ರಿ  ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ  ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು  ಅವಶ್ಯಕತೆ ಇರುವಂತಹ ಯಂತ್ರ ಹಾಗೂ ಸಾಮಾಗ್ರಿಗಳು ಇಂದು ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು  ಸವದಿ ತಿಳಿಸಿದರು.
ಬರುವ ಎರಡು ಮೂರು ದಿನಗಳಲ್ಲಿ ಆಕ್ಸಿಜನ್ ಪ್ರೊಡಕ್ಷನ್ ಪ್ರಾರಂಭವಾಗಲಿದೆ.
ಇದರಿಂದಾಗಿ ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ಕೊರೋನ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ಇಲ್ಲದಂತೆ ಇದು ಉತ್ಪಾದನೆ ಮಾಡಲಿದೆ.
  3 ನೇ ಅಲೆ ಬರುವ ಬಗ್ಗೆ ತಜ್ಞ ವೈದ್ಯರು ತಿಳಿಸಿರುವಂತೆ  3 ನೇ ಅಲೆಯನ್ನು ಎದುರಿಸಲು ಅಥಣಿಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡಿರುವುದಾಗಿ  ಲಕ್ಷ್ಮಣ ಸವದಿ ತಿಳಿಸಿದರು.

Related Articles

Back to top button