Latest

ಮುಕ್ತಿ ಮಾರ್ಗ ಕಂಡುಕೊಳ್ಳುವ ಸುಲಭ ಮಾರ್ಗ ತಿಳಿಸಿದವರು ದಾಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜ್ಞಾನಿ ತನಗೇನೂ ಗೊತ್ತಿಲ್ಲವೆಂಬ ಮನೋಭಾವ ಹೊಂದಿರುತ್ತಾನೆ. ಆದರೆ ಎಲ್ಲ ಗೊತ್ತಿದೆ ಎಂದು ಅಜ್ಞಾನಿ ತಿಳಿದುಕೊಂಡಿರುತ್ತಾನೆ. ನನಗೇನೂ ಗೊತ್ತಿಲ್ಲವೆಂಬ ಮನೋಭಾವ ಹೊಂದಿದವನು ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನ ಪಡೆಯುತ್ತ ಜ್ಞಾನ ಪರ್ವತವಾಗುತ್ತಾನೆ. ದಾಸರು ದಿನನಿತ್ಯದ ಬದುಕಿನಿಂದ ಮುಕ್ತಿ ಮಾರ್ಗ ಕಂಡುಕೊಳ್ಳುವ ಸುಲಭ ಮಾರ್ಗವನ್ನು ತಮ್ಮ ಪದಗಳಲ್ಲಿ ಸಾಮಾನ್ಯ ಜನರಿಗೂ ತಿಳಿಯುವಂತೆ ಹೇಳಿದರು ಎಂದು ಪಂ. ಶ್ರೀನಿಧಿ ಆಚಾರ್ಯ ಜಮನೀಸ ಹೇಳಿದರು.
ಶ್ರೀನಿವಾಸ ಭಜನಾ ಮಂಡಳಿ, ನಗರದ ಸಮಸ್ತ ಭಜನಾ ಮಂಡಳಿಗಳು ಹಾಗೂ ವಿಶ್ವಮಧ್ವ ಮಹಾಪರಿಷತ್ತು ಬೆಳಗಾವಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮ ನಗರದ ಮೊದಲ ಹಂತದಲ್ಲಿರುವ ಸತ್ಯಪ್ರಮೋದತೀರ್ಥ ಸಭಾಗೃಹದಲ್ಲಿ ಜ.೨೮ ರಿಂದ ಫೆ.೪ ರ ವರೆಗೆ ಎಂಟು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನವಾದ ಪುರಂದರದಾಸರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಯಮ – ನಚಿಕೇತ ಸಂವಾದ ಕುರಿತು ಅವರು ಪ್ರವಚನ ನೀಡಿದರು.
ಎಲ್ಲ ರೀತಿಯ ತಪಸ್ಸು ಸೇರುವುದು ಭಗವಂತನಲ್ಲಿ. ದೇಹವೇ ಜೀವವಲ್ಲ, ದೇಹದೊಳಗೆ ಜೀವವಿದ್ದಾನೆಂಬ ಅರಿವು ನಮಗೆ ಬೇಕು. ನಾಶವಿಲ್ಲದ ಜೀವ ಅನಂತವಾದುದು. ನಾವು ಕಳೆದುಕೊಳ್ಳುವುದು ದೇಹವನ್ನು ಮಾತ್ರವೆಂದು ಹೇಳಿದರು.
ಪ್ರವಚನ ನೀಡಿದ ಪಂ. ನರಸಿಂಹಾಚಾರ್ಯ ಗೋಠೆ ದಾಸರು ಧರ್ಮಾಚರಣೆಯೇ ಮೋಕ್ಷಕ್ಕೆ ದಾರಿಯೆಂದು ಸಾರಿ ಸಾರಿ ಹೇಳಿದ್ದಾರೆ ಎಂದರು.
ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ವಿ.ಜಿ. ಕುಲಕರ್ಣಿ, ದಿಗ್ಗಾಂವಿ, ಸಾತ್ವಿಕ, ಆರ್.ವಿ. ಬೆಳಗಾಂವಕರ, ಆರ್.ಎಸ್. ಬೆಂಗೇರಿ, ಎ.ಜಿ. ದೇಶಪಾಂಡೆ, ವಿ.ಎಂ. ಕುಲಕರ್ಣಿ, ಜಯತೀರ್ಥ ಸವದತ್ತಿ, ಕಿತ್ತೂರ, ಗಿರಿಧರ ಕಡಪ್ಪಾ, ಸಂಜೀವ ಮೋರಪ್ಪನವರ, ಪ್ರಭಾಕರ ಸರಳಾಯಿ ಮುಂತಾದವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪ್ರೊ. ಜಿ.ಕೆ. ಕುಲಕರ್ಣಿ ನಿರೂಪಿಸಿದರು.
ಪಂ. ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ’ಕುಂತೀಕೃತ ಕೃಷ್ಣ ಸ್ತೋತ್ರ’ ಕುರಿತು ಹಾಗೂ ಪಂ. ಪ್ರಮೋದಾಚಾರ್ಯ ಕಟ್ಟಿ ಇವರು ’ದಾಸರು ಕಂಡಂತೆ ಭೀಷ್ಮ ಮತ್ತು ದ್ರೌಪದಿ’ ವಿಷಯ ಕುರಿತು ಪ್ರವಚನ ನೀಡಿದರು. ಗುರುರಾಜ ಪರ್ವತಿಕರ, ವ್ಯಾಸಾಚಾರ್ಯ ಅಂಬೇಕರ, ಪೂರ್ಣಬೋಧ ಕಡಗದಕೈ, ಕೇಶವ ಮೌಲಿ ಮುಂತಾದವರು ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ… ಲಿಂಕ್ ಓಪನ್ ಮಾಡಿದಾಗ ಕಾಣುವ ಬೆಲ್ ಐಕಾನ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿ, ನಿರಂತರವಾಗಿ ಸುದ್ದಿಗಳನ್ನು ಪಡೆಯಿರಿ. ಸಲಹೆ, ಸೂಚನೆ, ಸಮಸ್ಯೆಗಳಿದ್ದರೆ ಕೆಳಗೆ ಕಾಣುವ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button