ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಂಪುಟ ಉಪಸಮಿತಿಯು ಜ.19ರಿಂದ 22ರವರೆಗೆ ಬರಪೀಡಿತ ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿಗಳಲ್ಲಿ ಪ್ರವಾಸ ಮಾಡಲಿದೆ.
19ರಂದು ಧಾರವಾಡ ಜಿಲ್ಲೆಯಲ್ಲಿನ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರುವ ಉಪಸಮಿತಿಯ ಸದಸ್ಯರು, ನಂತರ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಕುರಿತು ಹುಬ್ಬಳ್ಳಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
21ರಂದು ಉತ್ತರಕನ್ನಡ ಮತ್ತು 22ರಂದು ಬೆಳಗಾವಿ ಜಿಲ್ಲೆಗಳಲ್ಲಿ ಉಪಸಮಿತಿಯು ಪ್ರವಾಸ ಮಾಡಿ, ಇದೇ ರೀತಿಯ ಸಭೆಗಳನ್ನು ನಡೆಸಲಿದೆ ಎಂದು ಕಂದಾಯ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ