ಪ್ರಗತಿವಾಹಿನಿ ಸುದ್ದಿ, ಶಿರಸಿ:
ಪ್ರವಾಸಕ್ಕೆ ತೆರಳಿದ್ದ ಮೂರು ಜನ ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಪಾಲ್ಸ್ ನಲ್ಲಿ ನಡೆದಿದೆ.
ಇಂದು ಮಧ್ಯಾನದ ವೇಳೆ ಜಲಪಾತಕ್ಕೆ ತೆರಳಿದ್ದ ಮೂವರು ಸೆಲ್ಫೀ ತೆಗೆಯುವ ವೇಳೆ ಜಾರಿ ಬಿದ್ದು ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಿರಸಿಯ ಮುರಳಿ , ಸಿದ್ದಾಪುರದ ಅಭಿಷೇಕ್ ನಾಯ್ಕ, ಕೇರಳ ಮೂಲದ ಸಾಯಿ ಮೃತರು.
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿದ್ದು ಸ್ಥಳೀಯರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿದ್ದಾರೆ.
ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.