ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನದಿಯಲ್ಲಿ ಸ್ಥಾನ ಮಾಡುತ್ತಿದ್ದಾಗ ಮೊಸಳೆ ಬಾಯಿಗೆ ಸಿಲುಕಿದ್ದ ವ್ಯಕ್ತಿ ಅದರೊಂದಿಗೆ ಹೋರಾಡಿ ಬದುಕಿಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಈ ಘಟನೆ ನಡೆದಿದ್ದು, ದಾಂಡೇಲಿಯ ನಿರ್ಮಲ ನಗರ ನಿವಾಸಿ ನಾಗೇಶ್ ಈಶ್ವರ ಬಳ್ಳಾರಿ (43) ಮೊಸಳೆ ಜೊತೆ ಹೋರಾಡಿ ಬದುಕಿಬಂದ ವ್ಯಕ್ತಿ.
ಈತ ಕಾಳಿ ನದಿ ನೀರಿನಲ್ಲಿ ಸ್ನಾನಕ್ಕಾಗಿ ಇಳಿದಿದ್ದ. ಸ್ಥಾನ ಮಾಡುವಾಗ ಈತನ ಬಳಿ ಬಂದ ಮೊಸಳೆ ಮೊದಲು ಕಾಲಿಗೆ ಕಚ್ಚಿ ನೀರಿನ ಆಳಕ್ಕೆ ಎಳೆದೊಯ್ದಿತ್ತು. ನೀರಿನಲ್ಲಿ ಮೊಸಳೆಯೊಂದಿಗೆ ಸೆಣಸಿ ಬದುಕುಳಿದಿದ್ದಾರೆ.
ಎದೆ ಕೈ ಹಾಗೂ ಕಾಲಿಗೆ ಗಾಯವಾಗಿದ್ದು ಅರಣ್ಯ ಇಲಾಖೆ ಹಾಗೂ ಪೊಲೀಸರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ