Latest

ಮೋದಿ ಅಭೂತಪೂರ್ವ ವಿಜಯಕ್ಕೆ ಶ್ರೀ ಶೈಲ ಜಗದ್ಗುರು ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಧಾನಿ ನರೇಂದ್ರ ಮೋದಿಯವರ ಅಭೂತಪೂರ್ವ ವಿಜಯಕ್ಕೆ ಅಭಿನಂದನೆ ಸಲ್ಲಿಸಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮೋದಿ ನೇತೃತ್ವದಲ್ಲಿ ಭಾರತ ಮತ್ತೆ ವಿಶ್ವಗುರುವಾಗಲು ಧಾಪುಗಾಲು ಹಾಕುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ಮೋದಿಯವರ ಈ ವಿಜಯವು ಭಾರತ ದೇಶದ ವಿಜಯವಾಗಿದೆ. ಅವರ ವಿದೇಶ ನೀತಿ, ದೇಶದ ಸುರಕ್ಷತೆ ಮತ್ತು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಜಯವಾಗಿದೆ. ಮುಂಬರುವ ದಿನಗಳಲ್ಲಿ ನದಿಗಳ ಜೋಡಣೆ ಮೊದಲಾದವುಗಳ ಜೊತೆಗೆ ಗುಜರಾತ ಮಾದರಿಯಲ್ಲಿ ಜನಪರ ಯೋಜನೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ದೇಶದ ಸರ್ವಾಂಗೀಣ ವಿಕಾಸವಾಗಬೇಕಾದರೆ ಪ್ರಧಾನ ಮಂತ್ರಿಗಳೊಬ್ಬರು ಮಾತ್ರ ಕೆಲಸ ಮಾಡಿದರೆ ಸಾಲದು ಆಯ್ಕೆಯಾದ ದೇಶದ 542 ಸಂಸದರೆಲ್ಲರೂ ಪಕ್ಷಾತೀತವಾಗಿ ದೇಶದ ಹಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಶ್ರಮವಹಿಸಿ ಕಾರ್ಯ ಮಾಡಬೇಕು ಮತ್ತು ಮೋದಿಯವರ ಎಲ್ಲ ಉತ್ತಮ ಕಾರ್ಯಗಳಿಗೆ ಸಹಕರಿಸಬೇಕೆಂಬ ನಿರ್ದೇಶನದ ಜೊತೆಗೆ ಎಲ್ಲರನ್ನು ಅಭಿನಂದಿಸ ಬಯಸುತ್ತೇವೆ. ವಿಶೇಷವಾಗಿ ಕರ್ನಾಟಕದಿಂದ ಅತಿ ಹೆಚ್ಚು ಸೀಟು  ವಿಜಯಶಾಲಿಯಾಗಲು ಶ್ರಮಿಸಿ ಮೋದಿಯವರ ಕೈ ಬಲಪಡಿಸಿದ ಬಿ. ಎಸ್. ಯಡಿಯೂರಪ್ಪನವರಿಗೂ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button