Latest

ಮೋದಿ ಟೀಕಿಸಲು ಹೋಗಿ ಹಿಗ್ಗಾ ಮುಗ್ಗಾ ಉಗಿಸಿಕೊಂಡ ಪರಮೇಶ್ವರ; ಸಮರ್ಥನೆಗೆ ಬಾರದ ಸ್ವಪಕ್ಷೀಯರು!

 

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಲೆಬ್ರಿಟಿಗಳ ಮದುವೆಗೆ ಹೋಗಲು ಆಗುತ್ತದೆ, ಫಿಲ್ಮ್ ಸ್ಟಾರ್ ಗಳನ್ನು ಭೇಟಿ ಮಾಡಲು ಆಗುತ್ತದೆ. ನಡೆದಾಡುವ ದೇವರ ಅಂತ್ಯಕ್ರಿಯೆಗೆ ಬರಲಾಗಲಿಲ್ಲ ಎಂದು ಟ್ವೀಟ್ DrParameshwara ಮಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಟ್ವೀಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. 

ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಲ್ಲಿ ದನ ಕಾಯೋಕೆ ಹೋಗಿದ್ದರಾ ಎಂದು ಒಬ್ಬರು ಕೇಳಿದರೆ, ನಿಮ್ಮ ಇಟಾಲಿಯನ್ ಲೇಡಿ, ಪಪ್ಪು, ರಮ್ಯಾ ಯಾಕೆ ಬಂದಿಲ್ಲ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಪ್ರಧಾನಿ ಭದ್ರತೆಯ ಹಿನ್ನೆಲೆಯಲ್ಲಿ ಅನುಮತಿ ಸಿಗದಿದ್ದರಿಂದ ಬಂದಿಲ್ಲ ಎಂದು ನಿಮಗೆ ಗೊತ್ತಿದೆ. ಆದರೂ ನಿಮ್ಮ ನೀಚ ಬುದ್ದಿ ಬಿಟ್ಟಿಲ್ಲ. ಸಾವಿನಲ್ಲೂ ರಾಜಕೀಯ ಮಾಡುತ್ತೀರಿ ೆಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಟ್ವೀಟ್ ಬಾಣದ ಕೆಲವು ಸ್ಯಾಂಪಲ್ ಇಲ್ಲಿದೆ..

ನೀವು ಹೋಗಿದ್ದು ರಾಜಕೀಯ ಲಾಭಕ್ಕಾಗಿ, ಭಕ್ತಿಯಿಂದಲ್ಲ ಎನ್ನುವುದು ಈಗ ಗೊತ್ತಾಯಿತು ಬಿಡಿ, ಜಾಬ್ ಲೆಸ್ ಸೋನಿಯಾ, ರಾಹುಲ್ ಎಲ್ಲಿ ಹೋಗಿದ್ರು?, ನಾಚಿಕೆ ಆಗಲ್ವೇನ್ರೀ ನಿಮಗೆ? ಶ್ರೀಗಳ ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತೀರಲ್ಲಾ?

 ಮೋದಿಯವರು ಶ್ರೀಗಳನ್ನ ನೋಡೋಕೆ ಬರಲಿಲ್ಲಾ ಅಂದ್ರಲ್ಲಾ? ನಿಮ್ಮ ಸೋನಿಯಾ,ರಾಹುಲ್ ಗಾಂಧಿ ಯಾಕೆ ಬರಲಿಲ್ಲಾ?, ಶ್ರೀಗಳಿಗೆ ಈಗ ಭಾರತರತ್ನ ಕೊಡಬೇಕು ಅಂತೀರಲ್ಲಾ,ಹತ್ತುವರ್ಷಗಳ ಕಾಲ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿತ್ತು ಶ್ರೀಗಳಿಗೇಕೆ ಭಾರತರತ್ನ ಕೊಡಲಿಲ್ಲಾ?, ಛಿ , ಎಲ್ಲದ್ರಲ್ಲೂ ರಾಜಕೀಯ.

ಮಾಜಿ ಗೃಹ ಮಂತ್ರಿಗಳೇ ಹಾಗು ಹಾಲಿ ಉಪ ಮುಖ್ಯಮಂತ್ರಿಗಳೇ , ನಿಮಗೂ ಮೋದಿ ಬರದೇ ಇರುವದರ ಕಾರಣ ಗೊತ್ತು , ಆದರೂ ನೀಚ ಬುದ್ದಿ ಬಿಡಲ್ಲ ನೀವು . ನಿನ್ನೆ ತಾವು ಮುಂದೆ ನಿಂತು ಕಾರ್ಯ ಮಾಡುವಾಗ , ಭಕ್ತಿಯಿಂದ ಮಾಡುತ್ತಿದ್ದೀರಿ ಅಂದು ಕೊಂಡಿದ್ದೆ, ಅದರಲ್ಲಿ ನಿಮ್ಮ ಕಲ್ಮಶ ತುಂಬಿದ ರಾಜಕೀಯ ಮನಸ್ಸು ಇದೇ ಅಂತ ಗೊತ್ತಿರಲಿಲ್ಲ. ಅದೆಲ್ಲಾ ಸರಿ ಸ್ವಾಮಿ ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಸ್ವಾಮೀಜಿ ಗೆ ಭಾರತ ರತ್ನ ಬಿಡಿ ಕಡೆ ಪಕ್ಷ ಒಂದು ಪದ್ಮ ಪ್ರಶಸ್ತಿ ಸಹ ಕೊಟ್ಟಿಲ್ಲ.

ಕಾಂಗ್ರೇಸ್ನ ಹಿರಿಯ ನಾಯಕ ಜಾಫರ್ ಷರೀಫ್, ಅಂಬರೀಶ್ ಸತ್ತಾಗ ಪಪ್ಪುವಿಗೇಕೆ ಟ್ವೀಟ್ ಮಾಡ್ಲಿಲ್ಲ. ಈಗ ಲಿಂಗೈಕ್ಯರಾದ ನಮ್ಮ ಶ್ರೀಗಳ ಅಂತಿಮ ದರ್ಶನಕ್ಕೆ ಏಕೆ? ನಿಮ್ಮ ಪಕ್ಷದ ಅದ್ಯಕ್ಷ ರಾಹುಲ್ ಗಾಂಧಿ ಬರಲಿಲ್ಲ, ಆಗಿನ ಮುಖ್ಯಮಂತ್ರಿ ದೇವರಾಜ್ ಅರಸು ಸತ್ತಾಗ ಇಂದಿರಾಗಾಂಧಿ ಬರಲಿಲ್ಲವೆಕೆ? ಈ ರೀತಿಯ ಕೀಳುಮಟ್ಟದ ತುಕಾಲಿ ರಾಜಕೀಯ ಮಾಡುವುದನ್ನು ಬಿಡಿ

ನಡೆದಾಡುವ ದೇವರ ಅಗಲಿಕೆಯ ಶೋಕದಲ್ಲಿ ನಾವಿರುವಾಗ ಐಷಾರಾಮಿ ಹೋಟೆಲ್‌ನಲ್ಲಿ ದೇಶದ್ರೋಹಿ ಕನ್ಹಯ್ಯನಿಗೆ ರಾಜ್ಯ ಸರ್ಕಾರದಿಂದ ಅತಿಥಿ ಸತ್ಕಾರ!! ನಾಚಿಕೆ ಮಾನಮರ್ಯಾದೆ ಇಲ್ಲದ ಮಂತ್ರಿ ಮಂಡಲ 3ದಿನ ರಾಜ್ಯದಲ್ಲಿ ಶೋಕಾಂಚರಣೇ ಅಂತ ಹೇಳಿದ ಸಿಮಂ ಮಾತಿಗೆ ಬೆಲೆ ಇಲ್ಲ. ನೀವು ಮೋದಿ ಬಗ್ಗೆ ಟ್ವೀಟ್ ಮಾಡುತ್ತಿರಾ…

400ಕ್ಕೂ ಹೆಚ್ಚು ಜನರು ಪರಮೇಶ್ವರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಶೇಷವೆಂದರೆ, ಸ್ವತಃ ಕಾಂಗ್ರೆಸ್ಸಿಗರೂ ಪರಮೇಶ್ವರ ಅವರನ್ನು ಸಮರ್ಥಿಸಿಕೊಳ್ಳಲು ಬರಲಿಲ್ಲ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button