ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರ ನಾಯಕರಿಗೆ 1800 ಕೋಟಿ ರೂ. ಕಪ್ಪ ಕೊಟ್ಟಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸರ್ಜೆವಾಲಾ ಈ ಆರೋಪ ಮಾಡಿದ್ದು, ಎಲ್ಲ ವಿವರವನ್ನು ಯಡಿಯೂರಪ್ಪ ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದು, ಪ್ರತಿ ಪೇಜ್ ಗೆ ಸ್ವತಃ ಸಹಿ ಮಾಡಿದ್ದಾರೆ ಎಂದಿದ್ದಾರೆ.
ಅರುಣ ಜೈಟ್ಲೆ, ಲಾಲಕೃಷ್ಣ ಅಡ್ವಾಣಿ, ರಾಜನಾಥ ಸಿಂಗ್, ನಿತಿನ ಗಡಕರಿ ಮೊದಲಾದವರಿಗೆ ಹಣ ನೀಡಲಾಗಿದೆ ಎಂದು ಡೈರಿಯಲ್ಲಿ ಬರೆಯಲಾಗಿದೆ. ಈ ಡೈರಿ ಐಟಿ ಅಧಿಕಾರಿಗಳ ಬಲಿ 2017ರಿಂದ ಇದೆ. ಆದರೆ ಈ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಕೇಳುತ್ತಿಲ್ಲ ಎಂದು ಅರು ಆರೋಪಿಸಿದ್ದಾರೆ.
ಆದರೆ, ಇದೆಲ್ಲ ನಕಲಿ ಡೈರಿ. ಎಲ್ಲವೂ ಸುಳ್ಳು. ಈ ಬಗ್ಗೆ ಐಟಿ ಇಲಾಖೆ ಈಗಾಗಲೆ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.