Latest

ಯುವಜನಾಂಗವನ್ನು ಒಳ್ಳೆಯ ದಾರಿಯಲ್ಲಿ ನಡೆಸಲು ಶ್ರಮಿಸಿ -ಸಂಜಯ ಪಾಟೀಲ ಕರೆ

 

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ವಿರಾಟ್ ಸ್ಪೋರ್ಟ್ಸ್ ಕ್ಲಬ್ ಸಾಂಬ್ರಾ ಆಯೋಜಿಸಿದ್ದ ಅನಂತರಾವ ಹಣಮಂತರಾವ ಜಾಧವ ಸ್ಮರಣಾರ್ಥ ಜಾಧವ ಟ್ರೋಫಿ 2019 ಕ್ರಿಕೇಟ್ ಟೂರ್ನಾಮೆಂಟ್‌ನ್ನು ಮಾಜಿ ಶಾಸಕ ಸಂಜಯ ಪಾಟೀಲ ಉದ್ಘಾಟಿಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ ತಾಯಿ ತೀರಿಹೋದ ನಂತರ ಅವರು ಮಾಡಿದ ಸಾಧನೆಗಳನ್ನು ಮರೆತು ಬಿಡುತ್ತಾರೆ. ಆದರೆ ಇಲ್ಲಿ ತಮ್ಮ ತಂದೆ ತಾಯಿಗಳ ಸ್ಮರಣಾರ್ಥ ಇಂತಹ ಕ್ರಿಡೆಗಳನ್ನು ಹಮ್ಮಿಕೊಳ್ಳುವ ಮುಖಾಂತರ ಹಿರಿಯರು ಮಾಡಿದ ಸಾಧನೆಗಳಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಸಂಜಯ ಪಾಟೀಲ ಹೇಳಿದರು.
ಯುವ ಪೀಳಿಗೆಗೆ ಅವರುಗಳ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಇಂದಿನ ಯುವಪೀಳಿಗೆ ಕೇವಲ ಮೊಬೈಲ್‌, ವ್ಯಾಟ್ಸಪ್, ಫೇಸ್‌ಬುಕ್ ಗಳಲ್ಲಿ ತಲ್ಲೀನರಾಗಿ ಕಾಲಕಳೆಯುತ್ತಾ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಯುವಜನಾಂಗವನ್ನು ಒಳ್ಳೆಯ ದಾರಿಗೆ ತರಲು ಶ್ರಮಿಸಬೇಕೆಂದು ಕರೆನೀಡಿದರು.
ಬಾಳೇಕುಂದ್ರ ಕೆ.ಎಚ್. ಗ್ರಾಮದ ಹಿರಿಯರು, ಮಾಜಿ ಸೈನಿಕರು, ಸಮಾಜ ಸೇವಕರಾಗಿದ್ದ ಅನಂತರಾವ ಹಣಮಂತರಾವ ಜಾಧವ ಇವರ ಸ್ಮರಣಾರ್ಥ ಅವರ ಮಕ್ಕಳಾದ ಬಾಳೇಕುಂದ್ರಿ ಕೆ.ಎಚ್ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಶಾಂತ ಜಾಧವ, ಗ್ರಾಮ ಪಂಚಾಯತ ಸದಸ್ಯ, ಬಿಜೆಪಿ ಯುವ ಮುಖಂಡರಾದ ಯುವರಾಜ ಜಾಧವ, ಸಮಾಜ ಸೇವಕ ಶಿವರಾಜ ಜಾಧವ ಈ ಕ್ರಿಕೇಟ್ ಟೂರ್ನಾಮೆಂಟ್‌ನ್ನು ಆಯೋಜಿಸಿದ್ದರು.
ಮಾಜಿ ಎಪಿಎಮ್‌ಸಿ ಸದಸ್ಯ ರಾಜು ದೇಸಾಯಿ, ಮಾಜಿ ಬಿಜೆಪಿ ಅಧ್ಯಕ್ಷ ಶಂಕರ ಜತ್ರಾಟಿ, ಸಾಂಬ್ರಾ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮಣ ಕೊಳೆಪ್ಪಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಯುವ ಮೋರ್ಚಾದ ಯುವರಾಜ ಜಾಧವ, ಕಲ್ಲಪ್ಪಾ ಪಾಲ್ಕರ, ಉಮೇಶ ಪುರಿ, ಮಲ್ಲಪ್ಪಾ ಕಾಂಬಳೆ, ಶಂಕರ ಮಲ್ಲಣ್ಣವರ, ಮಹೇಶ ಜತ್ರಾಟಿ, ಮದನ ಅಪ್ಪಯ್ಯಾಚೆ, ಧರಣೇಂದ್ರ ತಳವಾರ, ಗಜಾನನ ಪಾಟೀಲ, ಪ್ರಕಾಶ ಪಾಟೀಲ, ಯಲ್ಲಪ್ಪಾ ಯಡ್ಡಿ, ವಿಕ್ರಮ ಸೂನಜಿ, ಪ್ರಶಾಂತ ಜಾಧವ, ಅಭಯ ಅವಲಕ್ಕಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button