*
ಪ್ರಗತಿವಾಹಿನಿ ಸುದ್ದಿ, ಅಥಣಿ
ರಮೇಶ್ ಜಾರಕಿಹೋಳಿಗೆ ಅನ್ಯಾಯವಾದರೆ ಅವರೊಂದಿಗೆ ನಾವಿದ್ದೇವೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಅವರು, ಮೊದಲಿಂದಲೂ ನಾನು ರಮೇಶ್ ಜಾರಕಿಹೋಳಿ ಬೆಂಬಲಿಗನಿದ್ದೆ. ಇಂದಿಗೂ ಅವರನ್ನು ಬೆಂಬಲಿಸುತ್ತೆನೆ. ಅವರೇ ನಮ್ಮ ನಾಯಕ, ಅವರ ನಿರ್ಧಾರಕ್ಕೆ ನಾನು ಬದ್ದ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ರಮೇಶ್ ಅವರನ್ನು ಸಂಪರ್ಕಿಸಿ ಪಕ್ಷದ ವೇದಿಕೆಯಲ್ಲಿ ಸಮಸ್ಯೆ ಬಗೆಹರಿಸಬೆಕು. ಕಳೆದ ಎಂಟು ದಿನಗಳಿಂದ ರಮೇಶ್ ಜಾರಕಿಹೋಳಿ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಅವರನ್ನು ಬೇಗ ಹೈಕಮಾಂಡ್ ಸಂಪರ್ಕಿಸಬೇಕು ಎಂದು ಕುಮಠಳ್ಳಿ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ