Latest

ಲಂಡನ್ ನಲ್ಲಿ ನೀರವ್ ಮೋದಿ ಬಂಧನ

ಪ್ರಗತಿವಾಹಿನಿ ಸುದ್ದಿ, ಲಂಡನ್

ಭಾರತದ  ಬ್ಯಾಂಕ್ ಗಳಿಗೆ ಬಹುಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದ ವಜ್ರಾಭರಣ ಉದ್ಯಮಿ ನೀರವ್ ಮೋದಿ ಅವರನ್ನು ಬಂಧಿಸಲಾಗಿದೆ.

Home add -Advt

ಲಂಡನ್ ಪೊಲೀಸರು ಮೋದಿಯನ್ನು ಬಂಧಿಸಿದ್ದು, ಇಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಳೆದ ವಾರವಷ್ಟೆ ನ್ಯಾಯಾಲಯ ಮೋದಿ ಬಂಧನಕ್ಕೆ ವಾರಂಟ್ ಹೊರಡಿಸಿ ವಿಚಾರಣೆಯನ್ನು ಮ.25ಕ್ಕೆ ಮುಂದೂಡಿತ್ತು.

ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಬಂಧನವಾಗಿದೆ. ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಲಾಗಿದ್ದು, ನ್ಯಾಯಾಲಯದ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 

ಲಂಡನ್ ನಲ್ಲಿ ಭಾರೀ ಆಸ್ತಿ ಮಾಡಿರು ಮೋದಿ ಅಲ್ಲೂ ವಜ್ರಾಭರಣ ಉದ್ಯಮ ನಡೆಸುತ್ತಿದ್ದ.

ಲಂಡನ್ ನಲ್ಲಿ ನೀರವ್ ಮೋದಿ ಪತ್ತೆ ಹಚ್ಚಿದ ಟೆಲಿಗ್ರಾಫ್ ಪತ್ರಿಕೆ

ನೀರವ್ ಮೋದಿ ಬಂಧನಕ್ಕೆ ಲಂಡನ್ ಕೋರ್ಟ್ ವಾರೆಂಟ್

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

Related Articles

Back to top button