Latest

ಲಯನ್ಸ್ ಪರಿವಾರದ 44ನೇ ಅನ್ನದಾಸೋಹ – ರೋಗಿಗಳ ಸೇವೆ ಪುಣ್ಯದ ಕೆಲಸ 

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಮನುಷ್ಯನಿಗೆ ಗಾಳಿ, ನೀರಿನ ಅವಶ್ಯಕತೆಯಂತೆ ಅನ್ನ ಸಹ ಅಮೂಲ್ಯವಾಗಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಹೇಳಿದರು. 
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ರೋಗಿಗಳಿಗೆ ಏರ್ಪಡಿಸಿದ್ದ 44ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅನ್ನದಾಸೋಹ ಮತ್ತು ರೋಗಿಗಳ ಸೇವೆಯು ಪುಣ್ಯದ ಕೆಲಸವಾಗಿದೆ ಎಂದರು.
ಮೂಡಲಗಿಯ ಲಯನ್ಸ್ ಕ್ಲಬ್‍ದ ಸಾಮಾಜಿಕ ಕಾರ್ಯಗಳೊಂದಿಗೆ ಅನ್ನದಾಸೋಹದ ಕಾರ್ಯವು ಶ್ಲಾಘನೀಯವಾಗಿವೆ ಎಂದರು. 
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ್ ಮಾತನಾಡಿ ಅನ್ನದಾಸೋಹವನ್ನು ಪ್ರತಿ ಎರಡು ವಾರಕ್ಕೊಮ್ಮೆ ತಪ್ಪದೆ ಏರ್ಪಡಿಸುತ್ತಿದ್ದು, ದಾನಿಗಳು ಅನ್ನದಾಸೋಹದ ಪ್ರಾಯೋಜಕತ್ವಪಡೆಯುವ ಅವಕಾಶವಿದೆ ಎಂದರು.  
ಲಯನ್ಸ್ ಕ್ಲಬ್ ಸದಸ್ಯ ಡಾ. ಅನಿಲ ಪಾಟೀಲ  ತಮ್ಮ ತಂದೆ ಸಹಕಾರಿ ಧುರೀಣ ನಿಂಗನಗೌಡ ಎಸ್. ಪಾಟೀಲ ಅವರ ಪುಣ್ಯಸ್ಮರಣೆ ನಿಮಿತ್ತವಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದರು. 
ಡಾ. ಪ್ರಕಾಶ ಬುದ್ನಿ ಅನ್ನದಾಸೋಹ ಕಾರ್ಯಕ್ರಮವನ್ನು ರೋಗಿಗಳಿಗೆ ಅನ್ನವನ್ನು ನೀಡುವ ಮೂಲಕ ಉದ್ಘಾಟಿಸಿದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.  ಡಾ. ಎಸ್.ಎಸ್. ಪಾಟೀಲ, ಸಂಜಯ ಮೋಕಾಶಿ, ಸುರೇಶ ನಾವಿ, ಅಬ್ದುಲ್‍ಗಫಾರ ಬಾಗವಾನ, ವೆಂಕಟೇಶ ಪಾಟೀಲ ಇದ್ದರು.
ಕಾರ್ಯದರ್ಶಿ ಶ್ರೀಶೈಲ್ ಲೋಕನ್ನವರ ನಿರೂಪಿಸಿದರು,  ಗಿರೀಶ ಆಸಂಗಿ ವಂದಿಸಿದರು.  
ಅನ್ನದಾಸೋಹದಲ್ಲಿ ಸಮುದಾಯ ಆರೋಗ್ಯ ಕೇಂದ್ರದ 400ಕ್ಕೂ ಅಧಿಕ ಸಂಖ್ಯೆಯ ಒಳ ಮತ್ತು ಹೊರರೋಗಿಗಳು ಭಾಗವಹಿಸಿದ್ದರು. 

Related Articles

Back to top button