Latest

ವಿಕಲಚೇತನರಿಗೆ ಸರಕಾರಿ ಸೌಲಭ್ಯಗಳ ಲಾಭ ಸಿಗಲಿ :ಮಣ್ಣಿಕೇರಿ

 

 
  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಕಲಚೇತನ ಮಕ್ಕಳಿಗಾಗಿ ಸರ್ಕಾರ ಗೃಹಾಧಾರಿತ ಶಿಕ್ಷಣ, ಸ್ಕೂಲ್ ರೇಡಿನೆಸ್ ಪ್ರೋಗ್ರಾಂ, ದೈನಂದಿನ ಕೌಶಲ್ಯ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಕಲಚೇತನ ಮಕ್ಕಳಿಗೆ ಇದರ ಲಾಭ ಸಿಗುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಜಿಲ್ಲಾ ಡೈಟ್ ಪ್ರಾಚಾರ್ಯ ಗಜಾನನ ಮಣ್ಣಿಕೇರಿ ನುಡಿದರು.
ಅವರು ಸೋಮವಾರ ವಿಶ್ವ ವಿಕಲಚೇತನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾ. ಸವಣೂರ, ಉದಯ ಹುನಕುಪ್ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಡಿ. ಬಡಿಗೇರ, ಸಮನ್ವಯಾಧಿಕಾರಿ ರಾಜಶೇಖರ ಚಳಗೇರಿ ದೀಪ ಪ್ರಜ್ವಲಿಸಿದರು.
ವಿಶ್ವ ವಿಕಲಚೇತನ ದಿನಾಚರಣೆ ನಿಮಿತ್ತ ವಿಶ್ವೇಶ್ವರಯ್ಯ ನಗರದ ಸರಕಾರಿ ಕನ್ನಡ ಶಾಲೆಯ ಮೈದಾನದಲ್ಲಿ ವಿಕಲಚೇತನ ಮಕ್ಕಳು ಹಾಗೂ ಪಾಲಕರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಲಿಂಬೂ ಚಮಚ, ಮಡಿಕೆ ಒಡೆಯುವುದು, ಓಟ, ಕಪ್ಪೆ ಜಿಗಿತ ಮುಂತಾದ ಸ್ಪರ್ಧೆಗಳಲ್ಲಿ ನಗರದ ವಿವಿಧ ಶಾಲೆಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಬಿಆರ್ ಟಿ, ಸಿಆರ್ ಪಿ, ಐಇ ಆರ್ಟಿಗಳಾದ ಅಶೋಕ ಅಯಾಚಿತ, ಎಸ್. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button