ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಂಜಯ ಘೋಡಾವತ್ ಸಮೂಹದ ಸ್ಟಾರ್ ಗ್ರುಪ್ ವಿಮಾನ ಸೇವೆ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆದಿದೆ.
ಹೊಸವರ್ಷದ ಮೊದಲ ದಿನವೇ ಅನುಮತಿ ಪತ್ರ ಸಿಕ್ಕಿದ್ದು, ಅತೀ ಶೀಘ್ರದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಲಾಗುವುದು. ಇಷ್ಟರಲ್ಲೇ ಟಿಕೆಟ್ ಮಾರಾಟ ಆರಂಭಿಸಲಾಗುವುದು ಎಂದು ಸಂಜಯ ಘೋಡಾವತ್ ತಿಳಿಸಿದ್ದಾರೆ.
50 ಸೀಟ್ ಸಾಮರ್ಥ್ಯದ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಉಡಾನ್ 3ರಲ್ಲಿ ಸೇರ್ಪಡೆಯಾಗಿರುವ ರಾಷ್ಟ್ರದ ಬೇರೆ ಬೇರೆ ನಗರಗಳಿಂದಲೂ ವಿಮಾನ ಸೇವೆ ಆರಂಭಿಸಲಾಗುವುದು. ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ವಿಮಾನ ಸೇವೆ ನೀಡಲು ಉದ್ಧೇಶಿಸಲಾಗಿದೆ ಎಂದು ಘೋಡಾವತ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ