ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬಜೆಟ್ ಪ್ರತಿಯನ್ನು ವಿರೋಧ ಪಕ್ಷಗಳಿಗೆ ಮೊದಲೇ ಕೊಡುವ ಸಂಪ್ರದಾಯವನ್ನು ಈ ಬಾರಿ ಸಮ್ಮಿಶ್ರ ಸರಕಾರ ಮುರಿಯಲಿದೆ.
ಬಜೆಟ್ ಮಂಡನೆ ಮಾಡಿದ ಬಳಿಕವಷ್ಟೆ ಬಜೆಟ್ ಪ್ರತಿಗಳನ್ನು ಹಂಚಲು ನಿರ್ಧರಿಸಲಾಗಿದೆ. ತನ್ಮೂಲಕ ಬಜೆಟ್ ಪ್ರತಿಗಳನ್ನು ಸದನದಲ್ಲಿ ಹರಿಯುವುದನ್ನು ತಡೆಯಲು ಬ್ಯುಸಿನೆಸ್ ಅಡ್ವೈಸರಿ ಕಮಿಟಿ (ಬಿಎಸಿ) ತೀರ್ಮಾನಿಸಿದೆ. ಅಲ್ಲದೆ ಬಜೆಟ್ ದೋಷಗಳನ್ನು ಎತ್ತಿ, ಅನುಮೋದನೆಗೆ ಅವಕಾಶ ನೀಡದಂತೆ ಪ್ರತಿಪಕ್ಷ ತೊಂದರೆ ಮಾಡಬಹುದು ಎನ್ನುವ ಕಾರಣವೂ ಇರಬಹುದು.
ಬಜೆಟ್ ಪ್ರತಿಗಳನ್ನು ವಿರೋಧ ಪಕ್ಷ ಸೇರಿ ಎಲ್ಲರಿಗೂ ಮಂಡನೆಗೆ ಮುನ್ನವೇ ಹಂಚುವ ಪರಿಪಾಠ ಮುಂಚಿನಿಂದಲೂ ಇತ್ತು. ಆದರೆ ಈ ಬಾರಿ ಹಾಗೆ ಮಾಡದಿರಲು ನಿರ್ಧರಿಸಲಾಗಿದೆ. ಆದರೆ ಬಜೆಟ್ ಮಂಡನೆ ವೇಳೆಯೂ ಬಿಜೆಪಿ ಗದ್ದಲವೆಬ್ಬಿಸಿ ಬಜೆಟ್ ಮಂಡಿಸುವುದಕ್ಕೂ ಅವಕಾಶ ನೀಡುವ ಸಾಧ್ಯತೆ ಇಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಈ ಬಾರಿಯ ಸಮ್ಮಿಶ್ರ ಸರಕಾರದ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಂಶಗಳಿಗಿಂತ ಸಮ್ಮಿಶ್ರ ಸರಕಾರದ ಭವಿಷ್ಯದ ಪ್ರಶ್ನೆಯೇ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಹಂಚಿ ಮತ್ತು ಉಚಿತವಾಗಿ ಸಬ್ ಸ್ಕ್ರೈಬ್ ಮಾಡಲು ತಿಳಿಸಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ