*ಎಂ.ಕೆ.ಹೆಗಡೆ* ಬೆಳಗಾವಿಯ ಪತ್ರಿಕೋದ್ಯಮದಲ್ಲಿ ಒಂದು ಜನಪ್ರಿಯ ಹೆಸರು, ಏನಾದರೂ ಹೊಸತೊಂದು ಮಾಡುವ ಹಂಬಲ ಇರುವ ವ್ಯಕ್ತಿತ್ವ. ಬೇರೆಯವರಂತೆ ಯಾವುದೇ ಒಂದು ಕೆಲಸಕ್ಕೆ ಜೋತು ಬಿದ್ದು ಅಲ್ಲಿಯೇ ಇರುವ ಜಾಯಮಾನ ಅವರದ್ದಲ್ಲ. ಹಲವಾರು ಪ್ರಿಂಟ್ ಮತ್ತು ದೃಶ್ಯ ಮಾಧ್ಯಮ ಕಚೇರಿಗಳ ಹೊಣೆಗಾರಿಕೆಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಲೇ ಉತ್ತಮ ಹೆಸರು ಗಳಿಸಿದವರು. ದೂರದ ಸಿರ್ಸಿಯಿಂದ ಬೆಳಗಾವಿಗೆ ಬಂದು ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಇಂದು ಬೆಳಗಾವಿ ನಗರದಲ್ಲಿ ತಮ್ಮದೇ ಆದ ಯೋಜನೆ ರೂಪಿಸಿ ಪತ್ರಿಕಾ ಮಾಧ್ಯಮದಲ್ಲಿ ನೂತನ ಪ್ರಯೋಗ ಮಾಡುವ ಹಂಬಲದಿಂದ ಮುಂದಡಿ ಇಡುತ್ತಿದ್ದಾರೆ. ಅವರ ಅಪಾರ ಅನುಭವ ಈ ಕ್ಷೇತ್ರದಲ್ಲಿ ಇನ್ನೂ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಅವರಿಗೆ ಪ್ರೇರೇಪಿಸುತ್ತಿದೆ. ಹತ್ತು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ.ಇಷ್ಟು ವರ್ಷಗಳು ಕಳೆದರೂ ನಮ್ಮಗಳ ಸಂಬಂಧವನ್ನು ಹಾಗೇ ಹಸಿರಾಗಿ ಉಳಿಸಿಕೊಂಡಿದ್ದಾರೆ. ಇಂದು ಉದ್ಘಾಟನೆಗೊಳ್ಳುತ್ತಿರುವ ಮೀಡಿಯಾ ಹೌಸ್ ಅವರ ಸಾಧನೆಯ ಮೈಲಿಗಲ್ಲು. ಅವರ ಸಾಧನೆಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು. ಅವರ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ಅವರ ಮುಂದಿನ ಎಲ್ಲಾ ಕೆಲಸಗಳಗೆ ಭಗವಂತನ ಆಶೀರ್ವಾದ ಇರಲಿ ಎಂದು ಮನತುಂಬಿ ಹಾರೈಸುತ್ತೇನೆ.
-ಎಸ್. ಜಯಕುಮಾರ,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ