*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಉದ್ಯಮಬಾಗ ಕೈಗಾರಿಕೆ ಪ್ರದೇಶಕ್ಕೆ ಸಂಬಂಧಿಸಿದ ಸಚಿವರನ್ನು ಆಹ್ವಾನಿಸಿ ಅಲ್ಲಿನ ನೈತ ಸಮಸ್ಯೆಯನ್ನು ದರಶನ ಮಾಡಿಸಲು ಶನಿವಾರ ಸೇರಿದ್ದ ಸಣ್ಣ ಕೈಗಾರಿಕೆಗಳ ಸಂಘ ನಿರ್ಧರಿಸಿದೆ.
ಸಂಘದ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂರಾರು ಉದ್ಯಮಿಗಳು ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಲವರು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ರದೇಶಕ್ಕೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಹಾಗಾಗಿ ಇನ್ನೊಮ್ಮೆ ಎಲ್ಲರಿಗೂ ಮನವಿ ಸಲ್ಲಿಸಿ, ನಿಗದಿತ ಸಮಯದಲ್ಲಿ ಅಭಿವೃದ್ಧಿ ಮಾಡಿಲು ವಿನಂತಿಸಬೇಕು. ಇಲ್ಲವಾದಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಜೊತೆಗೆ ಸಂಬಂಧಿಸಿದ ಸಚಿವರನ್ನು ನೈಜತೆಯ ದರಶನಕ್ಕೆ ಆಮಂತ್ರಿಸಬೇಕು ಎಂದೂ ತೀರ್ಮಾನಿಸಲಾಯಿತು.
ಸಂಬಂಧಿಸಿದ ಸಚಿವರು, ಮಹಾನಗರಪಾಲಿಕೆ ಆಯುಕ್ತರು, ಮೇಯರ್, ಉಪಮೇಯರ್ ಮೊದಲಾದವರನ್ನು ಭೇಟಿ ಮಾಡಿ ಮತ್ತೊಮ್ಮೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಯಿತು.
ಉಪಾಧ್ಯಕ್ಷ ಅಶೋಕ ಕೋಳಿ, ಕಾರ್ಯದರ್ಶಿ ಶ್ರೀಧರ ಉಪ್ಪಿನ್, ಸದಸ್ಯರಾದ ವಿಠ್ಠಲ ಗವಾಸ್, ಸಂಜಯ ಶಿಂಧೆ, ಮಹಾದೇವ ಚೌಗಲೆ ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ