ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೇಂದ್ರ ಸರ್ಕಾರ ರಾಷ್ಟ್ರದ ಜನರಿಗೆ, ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಜನರು ಕಾರ್ಮಿಕರು, ರೈತರು, ಹಿರಿಯ ನಾಗರಿಕರು, ಅಂಗನವಾಡಿ ಕಾರ್ಯಕರ್ತರು ಹೀಗೆ ಹತ್ತು ಹಲವಾರು ಸಮುದಾಯಕ್ಕೆ ಅನುಕೂಲವಾಗುವಂತಹ, ಅದ್ಬುತವಾದಂತಹ ಆಯವ್ಯಯವನ್ನು ಮಂಡಿಸಿದೆ. ಸರ್ವೇಜನಾಃ ಸುಖಿನೋಭ ಸರ್ವೇಜನಾಃ ಸುಖಿನೋಭವಂತು ವಂತು ಎನ್ನುವಂತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಮ ಕವಟಗಿಮಠ ಅಭಿಪ್ರಾಯಪಟ್ಟಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮಂಡಿಸಿದ ಆಯವ್ಯಯಗಳ ಇತಿಹಾಸದಲ್ಲಿ ಇದೊಂದು ದಾಖಲೆಯ ಆಯವ್ಯಯವಾಗಿದೆ. ಆದಾಯ ತೆರಿಗೆಯ ಮಿತಿಯನ್ನು ೨.೫ ಲಕ್ಷದಿಂದ ೫ ಲಕ್ಷಕ್ಕೆ ಏರಿಸಲಾಗಿದೆ. ಸಣ್ಣ ರೈತರ ಖಾತೆಗೆ ನೇರವಾಗಿ ೬೦೦೦ ರೂಪಾಯಿ ಜಮಾ ಮಾಡುವ ಈ ಆಯವ್ಯಯದಿಂದ ದೇಶದಲ್ಲಿ ೮೭% ರೈತರಿಗೆ ಲಾಭವಾಗುವುದು. ಅಂಗನವಾಡಿ ಕಾಂರ್ಯಕರ್ತರ ಸಂಬಳ ಹೆಚ್ಚಳ, ೧೦ ಕೋಟಿ ಕಾರ್ಮಿಕರಿಗೆ ೩೦೦೦ ಪಿಂಚಣಿ, ೮ ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ, ಆಹಾರ ಪದಾರ್ಥಗಳ ಉತ್ಪಾದನೆಯ ಸಹಾಯಧನ ದ್ವಿಗುಣ, ೩೬ ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ಇಳಿಕೆ, ಮಧ್ಯಮ ವರ್ಗದ ಜನರಿಗೆ ಈ ಆಯವ್ಯಯದಿಂದ ಫಲ, ಕೃಷಿ ಸಾಲದ ಮೇಲೆ ಶೇ.೨% ರಷ್ಟು ಬಡ್ಡಿ ವಿನಾಯಿತಿ, ಗೃಹ ಸಾಲದ ಮೇಲೆ ರೂ.೨ ಲಕ್ಷದವರೆಗೆ ಬಡ್ಡಿ ರಹಿತ ಸಾಲ ಬಜೆಟ್ ನ ಆಕರಷಕ ಯೋಜನೆಗಳಾಗಿವೆ ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷದವರು ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಇಷ್ಟೊಂದು ವಿನಾಯಿತಿ ಬಜೆಟ್ ಮಂಡಿಸಲು ಅವಕಾವಿಲ್ಲವೆಂದು ಹೇಳಿದ್ದಾರೆ. ಆದರೆ ಪ್ರಾಯೋಗಿಕವಾಗಿ ಯಾವುದೇ ಸರ್ಕಾರಕ್ಕೂ ಆಯವ್ಯಯ ಮಂಡಿಸಲು ಸಂಪೂರ್ಣ ಅಧಿಕಾರವಿರುತ್ತದೆ. ಮಧ್ಯಾವದಿ ಬಜೆಟ್ ಅಥವಾ ಪೂರ್ಣಾವಧಿ ಬಜೆಟ್ ಎಂಬ ಯಾವುದೇ ವಿಧಗಳಿಲ್ಲ. ಬಜೆಟ್ ಎಂಬುದು ಒಂದೇ. ಇದೊಂದು ಪ್ರಗತಿಪರ, ಜನಾನುರಾಗಿ ಎಲ್ಲ ಸಮುದಾಯಕ್ಕೂ ಅನುಕೂಲವಾಗುವ ಆಯವ್ಯಯವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ