ಪ್ರಗತಿವಾಹಿನಿ ಸುದ್ದಿ, ಸವದತ್ತಿ
ಸೋಮವಾರ ಬೆಳಗಿನ ಜಾವ ಚಕ್ಕಡಿ ಮತ್ತು ಬಸ್ಸು ಡಿಕ್ಕಿಯಾಗಿ ಸ್ಥಳದಲ್ಲಿಯೇ ಓರ್ವ ಮೃತ ಪಟ್ಟಿದ್ದಾನೆ.
ಮೃತ ಪಟ್ಟವನು ಬಾದಾಮಿ ತಾಲೂಕಿನ ಕಾಕಡೂರ ಗ್ರಾಮದ ಹನುಮಂತಪ್ಪ ಕಾಟಪ್ಪ ಮಾದರ (24). ಈತ ಎಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಯಲ್ಲಿ ಬರುತ್ತಿರುವಾಗ ಕೆ ಎಸ‌್ ಆರ್ ಟಿ ಸಿ ಬಸ್ಸು ಹಿಂದಿನಿಂದ ಚಕ್ಕಡಿಗೆ ಡಿಕ್ಕಿ ಹೂಡೆದಿದೆ. ಹನುಮಂತಪ್ಪ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.
ಸವದತ್ತಿ – ಶಿರಸಂಗಿ ಮಧ್ಯೆ ಬಶಿಡೋಣಿ ಕ್ರಾಸ್ ಹತ್ತಿರ ಈ ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ