ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಮೇ ೨೬ ರಂದು ನಡೆದ ಎಮ್ಮೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೋಲಿಸರು ೨ ಜನ ಆರೋಪಿಗಳನ್ನ ಬಂಧಿಸಿ ಕದ್ದ ಎಮ್ಮೆಗಳನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದ್ದಾರೆ.
ಖಚಿತ ಮಾಹಿತಿ ಮತ್ತು ಲಭ್ಯವಾದ ಸಾಕ್ಷಿ ಅಧಾರಾದ ಮೇಲೆ ಅಗಸಗಿ ಗ್ರಾಮಕ್ಕೆ ಅಂಟಿಕೋಂಡಿರುವ ಪಕ್ಕದ ಗ್ರಾಮದ ೫ ಜನ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಕಾಕತಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ೫ ಜನರಲ್ಲಿ ಕದ್ದ ಎಮ್ಮೆಗಳನ್ನು ಸಾಗಿಸಲು ಉಪಯೋಗಿಸಿತ್ತಿದ್ದ ಟೇಂಪೋ ಮಾಲಿಕನು ಕೂಡ ಇರುವುದಾಗಿ ತಿಳಿದು ಬಂದಿದೆ. ಇನ್ನುಳಿದಿಬ್ಬರು ನಾಪತ್ತೆಯಾಗಿದ್ದಾರೆ.
ಕೇಸ್ ಮುಚ್ಚಲು ಹುನ್ನಾರ?
ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳು ರಾಜಕೀಯ ಪ್ರಭಾವ ಬಳಿಸಿ ಪ್ರಕರಣ ಮುಚ್ಚಿ ಹಾಕಲು ಕುತಂತ್ರ ನಡೆಸಿರುವುದಾಗಿ ಗ್ರಾಮದಲ್ಲಿ ಸುದ್ದಿ ಹಬ್ಬಿದೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲಿಸ್ ವರಿಷ್ಠಾದಿಕಾರಿಗಳು ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಕಾಕತಿ ಪೋಲಿಸರಿಗೆ ಎಚ್ಚರಿಕೆ ನೀಡಿದ್ದಾರೆಂದು ಗೊತ್ತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ